
ಘಾಜಿಯಾಬಾದ್ ನ ಝಂದಾಪುರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, ಖಾಸಗಿ ಅಂಗಕ್ಕೆ ಪಟಾಕಿ ಗನ್ ನಿಂದ ಸ್ಪೋಟಕ ಸಿಡಿಸಿದ ಪರಿಣಾಮ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ದೀಪಾವಳಿಯ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಪ್ರದೀಪ್, ನಾಟು ಎಂದು ಕರೆಯಲ್ಪಡುವ ಅಫ್ಜಲ್‌ನ ಸೊಂಟದ ಕೆಳಗೆ ಕಬ್ಬಿಣದ ಪೈಪ್ ನಿಂದ ಪಟಾಕಿ ಗನ್ ನಿಂದ ಸ್ಪೋಟಿಸಿದ್ದಾನೆ. ಘಟನೆಯ ನಂತರ, ಅಫ್ಜಲ್ ಅವರನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಅವರು ಬದುಕುಳಿಯಲಿಲ್ಲ ಎಂದು ಸಾಹಿಬಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ಭಾಸ್ಕರ್ ವರ್ಮಾ ದೃಢಪಡಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಫ್ಜಲ್ ಮತ್ತು ಪ್ರದೀಪ್ ಪರಸ್ಪರ ಪರಿಚಿತರಾಗಿದ್ದರು, ಘಟನೆಯಿಂದ ಉಂಟಾಗುವ ಸಂಭಾವ್ಯ ಕೋಮು ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೊಲೀಸರು, ಶಾಂತಿಯನ್ನು ಕಾಪಾಡಲು ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.