alex Certify ಹೆಚ್ಚಿನ ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮಂಟಪದಲ್ಲೇ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಿನ ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮಂಟಪದಲ್ಲೇ ಗೂಸಾ

ಘಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಕ್ಕಾಗಿ ವರನಿಗೆ ಥಳಿಸಲಾಗಿದೆ. ವ್ಯಕ್ತಿಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ರಾತ್ರಿ ಮದುವೆ ನಡೆಯುತ್ತಿದ್ದ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ವಿಡಿಯೋದಲ್ಲಿ, ಕೆಲವರು ಶೇರ್ವಾಣಿ ಧರಿಸಿದ್ದ ವ್ಯಕ್ತಿಯನ್ನು ಸುತ್ತುವರೆದು ಬಾರಿಸಿದ್ದಾರೆ. ವರನನ್ನು ಸಭಾಂಗಣದಲ್ಲಿ ಎಳೆದೊಯ್ದು ಥಳಿಸಿದ್ದಾರೆ. ಕೊನೆಗೆ ವರನನ್ನು ಆತನ ಸಂಬಂಧಿ ಎನ್ನಲಾದ ಮಹಿಳೆ ರಕ್ಷಿಸಿದ್ದಾಳೆ. ಇದರ ಮಧ್ಯೆ, ಬ್ಯಾಂಕ್ವೆಟ್ ಹಾಲ್ ಸಿಬ್ಬಂದಿ ಮತ್ತು ಇತರ ಅತಿಥಿಗಳು ಘಟನೆಯನ್ನು ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ. ಹೆಚ್ಚಿನ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ಕಡೆಯವರು ವ್ಯಕ್ತಿಗೆ ಥಳಿಸಿದ್ದಾರೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎನ್ನಲಾಗಿದೆ.

ವರದಿಯ ಪ್ರಕಾರ, ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಮತ್ತು ಬೇಡಿಕೆ ಈಡೇರಿಸದಿದ್ದರೆ ಮದುವೆ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ವಧುವಿನ ಮನೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರ ನೀಡಿದ್ದಾರೆ. ಹೀಗಿದ್ದರೂ, ವರನ ಕಡೆಯವರು ಸಮಾಧಾನವಾಗಲಿಲ್ಲ. ಸಾಕಷ್ಟು ಮನವೊಲಿಸಿದರೂ ವರನ ಮನೆಯವರಿಗೆ ಮನವರಿಕೆ ಆಗಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ. ವರನಿಗೆ ಈ ಹಿಂದೆ 2-3 ಬಾರಿ ಮದುವೆಯಾಗಿದೆ ಎಂದು ಹುಡುಗಿ ಕಡೆಯವರು ಹೇಳಿಕೊಂಡಿದ್ದಾರೆ. ವರನನ್ನು ಆಗ್ರಾ ನಿವಾಸಿ ಮುಝಮ್ಮಿಲ್ ಎಂದು ಗುರುತಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...