alex Certify ವಿಡಿಯೋ ಡಿಲಿಟ್‌ ಮಾಡದ ಕಾರಣಕ್ಕೆ ಟ್ವಿಟರ್​ ವಿರುದ್ಧ ಪ್ರಕರಣ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಡಿಲಿಟ್‌ ಮಾಡದ ಕಾರಣಕ್ಕೆ ಟ್ವಿಟರ್​ ವಿರುದ್ಧ ಪ್ರಕರಣ ದಾಖಲು

ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪದ ಅಡಿಯಲ್ಲಿ ಘಾಜಿಯಾಬಾದ್​ ಪೊಲೀಸರು ಟ್ವಿಟರ್,​​​ ಪತ್ರಕರ್ತ ಸೇರಿದಂತೆ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಸ್ಪಷ್ಟೀಕರಣದ ಬಳಿಕವೂ ಟ್ವೀಟ್​ನ್ನು ಅಳಿಸದೇ ಹೋದ ಕಾರಣಕ್ಕೆ ಟ್ವಿಟರ್​ ವಿರುದ್ಧ ಆರೋಪ ಎದುರಾಗಿದೆ. ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್​ 153, 153 ಎ,295ಎ, 505 ಹಾಗೂ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಾವು ಲೋನಿ ಬಾರ್ಡರ್​​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಫ್​ಐಆರ್​​ನಲ್ಲಿ ನಮೂದಾಗಿರುವ ವ್ಯಕ್ತಿಗಳ ವಿರುದ್ಧ ಶೀಘ್ರವೇ ಸಮನ್ಸ್​​ ಜಾರಿ ಮಾಡುತ್ತೇವೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸೋಮವಾರ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದಂತೆಯೇ ಘಾಜಿಯಾಬಾದ್​ ಪೊಲೀಸರು ಈ ಸಂಬಂಧ ತನಿಖೆಗೆ ಮುಂದಾಗಿದ್ದಾರೆ. ಇದು ಜೂನ್​ 5ರಂದು ಲೋನಿ ಬಾರ್ಡರ್​ನ ಮನೆಯೊಂದರಲ್ಲಿ ತೆಗೆದ ವಿಡಿಯೋ ಆಗಿದೆ. ಓರ್ವ ಹಲ್ಲೆಕೋರನನ್ನ ಪೊಲೀಸರು ಬಂಧಿಸಿದ್ದು ಹಲ್ಲೆಕೋರನನ್ನ ಪರ್ವೇಶ್​​ ಗುಜ್ಜರ್​ ಎಂದು ಗುರುತಿಸಲಾಗಿದೆ. ಅಲ್ಲದೇ ಈ ಹಲ್ಲೆಯಲ್ಲಿ ಭಾಗಿಯಾದ ಇತರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ನಡುವೆ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಇದರಲ್ಲಿ ವೃದ್ಧ ಬುಲಂದ್​ ಶಹರದಿಂದ ಘಾಜಿಯಾಬಾದ್​ಗೆ ಭೇಟಿ ನೀಡುತ್ತಿದ್ದ ವೇಳೆ ನನ್ನನ್ನು ಅಪಹರಣ ಮಾಡಲಾಗಿದೆ. ಹಾಗೂ ಜೈ ಶ್ರೀರಾಮ್​ ಎಂದು ಹೇಳುವಂತೆ ಹಲ್ಲೆಕೋರರು ಒತ್ತಾಯಿಸಿದ್ದರು ಎಂದು ತಿಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...