ವಿಚಾರಣೆ ವೇಳೆ ನ್ಯಾಯಾಧೀಶರು – ವಕೀಲರ ವಾಗ್ವಾದ; ಕೋರ್ಟ್ ಆವರಣದಲ್ಲೇ ಪೊಲೀಸರಿಂದ ಲಾಠಿಚಾರ್ಜ್ | Video 30-10-2024 10:54AM IST / No Comments / Posted In: Latest News, India, Live News ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಮತ್ತು ವಕೀಲರ ನಡುವೆ ಮಂಗಳವಾರ ತೀವ್ರ ಮಾತಿನ ಚಕಮಕಿ ನಡೆದ ನಂತರ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಭಾರಿ ವಾಗ್ವಾದ ನಡೆಯಿತು. ಭಿನ್ನಾಭಿಪ್ರಾಯದ ಕುರಿತು ತಮ್ಮ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾ ನಿರತ ವಕೀಲರನ್ನು ನ್ಯಾಯಾಲಯದಿಂದ ಹೊರ ಹಾಕಲು ನ್ಯಾಯಾಧೀಶರು ಪೊಲೀಸರನ್ನು ಕರೆದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ತಮಗೆ ಗಾಯಗಳಾಗಿವೆ ಎಂದು ಕೆಲ ವಕೀಲರು ಆರೋಪಿಸಿದ್ದು, ಉದ್ರಿಕ್ತ ವಕೀಲರು ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೊಲೀಸರು ಮತ್ತು ವಕೀಲರ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ತೋರಿಸಿದ್ದು, ನ್ಯಾಯಾಲಯದ ಆವರಣದಿಂದ ವಕೀಲರನ್ನು ಹೊಹಾಕಲು ಪೊಲೀಸರು ಬಲ ಪ್ರಯೋಗಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರ ಪ್ರಯತ್ನಗಳ ನಡುವೆ ನ್ಯಾಯಾಲಯದ ಆವರಣದಲ್ಲಿ ಕುರ್ಚಿಗಳನ್ನು ಎಸೆದಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ನಂತರ ಪರಿಸ್ಥಿತಿ ನಿಯಂತ್ರಿಸಲು ಅರೆಸೇನಾ ಪಡೆ ಸಿಬ್ಬಂದಿಯನ್ನೂ ಕರೆಸಲಾಯಿತು. ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರ ಪ್ರಕಾರ, ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವಕೀಲರ ಗುಂಪು, ಜಿಲ್ಲಾ ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿತು ಮತ್ತು ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿತು ಎಂದಿದ್ದಾರೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಅವರು ನಿರೀಕ್ಷಣಾ ಜಾಮೀನು ಪ್ರಕರಣವನ್ನು ಆದ್ಯತೆಯ ಮೇರೆಗೆ ಆಲಿಸಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ವಕೀಲರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ, ಅವರು ಅದನ್ನು ನಿರಾಕರಿಸಿ ಪಟ್ಟಿಯ ಪ್ರಕಾರ ಪ್ರಕರಣವನ್ನು ಪುರಸ್ಕರಿಸಲಾಗುವುದು ಎಂದು ಹೇಳಿದರು. . “ಇದಾದ ಬಳಿಕ, ವಕೀಲರ ಗುಂಪು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಇದರಿಂದಾಗಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟಾದಾಗ ನ್ಯಾಯಾಧೀಶರು ಪೊಲೀಸರನ್ನು ಕರೆಸಿದರು. ಪೊಲೀಸರು ನ್ಯಾಯಾಲಯಕ್ಕೆ ಆಗಮಿಸಿ ಲಾಠಿ ಚಾರ್ಜ್ ಮಾಡಿದರು, ಇದರಿಂದಾಗಿ ಹನ್ನೆರಡು ವಕೀಲರು ಗಾಯಗೊಂಡರು ಎಂದು ವಕೀಲರು ಆರೋಪಿಸಿದ್ದಾರೆ. ಏತನ್ಮಧ್ಯೆ, ಮಾಜಿ ಜಿಲ್ಲಾ ಬಾರ್ ಅಧ್ಯಕ್ಷ ನಹರ್ ಸಿಂಗ್ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಘಟನೆಯ ದೂರನ್ನು ಕಳುಹಿಸಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿ ನ್ಯಾಯಾಲಯಕ್ಕೆ ಆಗಮಿಸಿದ ವಕೀಲರಾದ ಜಿತೇಂದ್ರ ಸಿಂಗ್ ಮತ್ತು ಅಭಿಷೇಕ್ ಯಾದವ್ ಅವರು ಜಿಲ್ಲಾ ನ್ಯಾಯಾಧೀಶರನ್ನು ಆದ್ಯತೆಯ ಮೇಲೆ ವಾದಗಳನ್ನು ಆಲಿಸುವಂತೆ ಅಥವಾ ನ್ಯಾಯಾಲಯದ ಸಭಾಂಗಣವು ಕಿಕ್ಕಿರಿದಿದ್ದರಿಂದ ಪ್ರಕರಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದರು ಎಂದು ಅವರು ಆರೋಪಿಸಿದರು. ಜಿಲ್ಲಾ ನ್ಯಾಯಾಧೀಶರು ತಾಳ್ಮೆ ಕಳೆದುಕೊಂಡು ವಕೀಲರನ್ನು ನಿಂದಿಸಲು ಆರಂಭಿಸಿದರು ಎಂದು ಯಾದವ್ ಹೇಳಿದ್ದಾರೆ. Kalesh b/w lawyers and judge in Ghaziabad, UP court ;Judge called police. Police chased the lawyers out of the court room, happened during the hearing of a case) pic.twitter.com/UchpJzDik2 — Ghar Ke Kalesh (@gharkekalesh) October 29, 2024