ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರೊಂದಿಗೆ ಸೆಕ್ಸ್ ಚಾಟ್ ಮಾಡಿ ಬಳಿಕ ಬ್ಲಾಕ್ಮೇಲ್ ಮಾಡುತ್ತಿದ್ದ ದಂಪತಿಯನ್ನು ಘಾಜಿಯಾಬಾದ್ನಲ್ಲಿ ಬಂಧಿಸಲಾಗಿದೆ.
ಹನಿಟ್ರ್ಯಾಪ್ ಮೂಲಕ ಈ ದಂಪತಿ ಸಾಕಷ್ಟು ಉದ್ಯಮಿಗಳಿಂದ ಹಣ ಲೂಟಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಬಂಧಿತರನ್ನು ಯೋಗೇಶ್ ಹಾಗೂ ಸಪ್ನಾ ಗೌತಮ್ ಎಂದು ಗುರುತಿಸಲಾಗಿದೆ. ಒಂದು ವರ್ಷದ ಈ ಜೋರಿ 300 ಮಂದಿಗೆ ಹನಿಟ್ರ್ಯಾಪ್ ಮಾಡಿದ್ದರು 20 ಕೋಟಿ ರೂಪಾಯಿ ಹಣ ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಮಿಗಳು, ಉನ್ನತ ಹುದ್ದೆಯಲ್ಲಿ ಇರುವವರು ಸೇರಿದಂತೆ ವಿವಿಧ ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ದಂಪತಿ ಸೆಕ್ಸ್ ಚಾಟ್ ಮಾಡಿ ಬಳಿಕ ಬ್ಲಾಕ್ಮೇಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹನಿಟ್ರ್ಯಾಪ್ ಮಾಡಲು ಈ ದಂಪತಿ 30 ಮಂದಿ ಮಹಿಳೆಯರನ್ನು ಹೊಂದಿದ್ದರು ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಘಾಜಿಯಾಬಾದ್ ಪೊಲೀಸ್ ಅಧಿಕಾರಿ, ಸಪ್ನಾ ಹಾಗೂ ಆಕೆಯ ಪತಿ ಹೊಸ ಹೊಸ ಐಡಿಯ ಮೂಲಕ ವೆಬ್ಸೈಟ್ ಖಾತೆ ರಚಿಸುತ್ತಿದ್ದರು. ಇದಾದ ಬಳಿಕ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸೆಕ್ಸ್ ಚಾಟ್ ಮಾಡುತ್ತಿದ್ದರು. ಈ ಕೆಲಸಕ್ಕೆಂದೇ 30 ಮಹಿಳೆಯರನ್ನು ಇಟ್ಟುಕೊಂಡಿದ್ದ ಈ ಸಪ್ನಾ ಅವರಿಗೆ ತರಬೇತಿಯನ್ನೂ ನೀಡಿದ್ದಳು. ಲೋಕೇಶ್ ವ್ಯಕ್ತಿಗಳ ಲೊಕೇಷನ್, ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳ ಮೇಲೆ ಕಣ್ಣಿಡುತ್ತಿದ್ದ ಎಂದು ಹೇಳಿದ್ದಾರೆ.
ಸ್ಟ್ರಿಪ್ಚಾಟ್ ಎಂಬ ವೈಬ್ಸೈಟ್ನಲ್ಲಿ ಪ್ರತಿ ನಿಮಿಷಕ್ಕೆ 234 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಅರ್ಧ ಹಣ ವೆಬ್ಸೈಟ್ ಮಾಲೀಕರಿಗೆ ಹಾಗೂ ಉಳಿದ ಹಣ ದಂಪತಿಗೆ ಸಿಗುತ್ತಿತ್ತು. ಇಲ್ಲಿ ಸೆಕ್ಸ್ ಚಾಟ್ ಮಾಡಲಾಗ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವೆಬ್ಸೈಟ್ಗೆ ಬರುವ ಶ್ರೀಮಂತರ ಬಳಿ ಮೊಬೈಲ್ ನಂಬರ್ ನೀಡುವಂತೆ ಕೇಳಲಾಗ್ತಾ ಇತ್ತು. ಇದಾದ ಬಳಿಕ ಅವರಿಗೆ ವಾಟ್ಸಾಪ್ನಲ್ಲಿ ವಿಡಿಯೋ ಕಾಲ್ ಮಾಡಿ ಲೈಂಗಿಕ ಚಟುವಟಿಕೆ ನಡೆಸಲಾಗ್ತಿತ್ತು. ಬಳಿಕ ಇದೇ ವಿಡಿಯೋವನ್ನು ಇಟ್ಟುಕೊಂಡು ಶ್ರೀಮಂತರ ಬಳಿ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.