ಚಳಿಗಾಲದಲ್ಲಿ ತ್ವಚೆ ಜಿಡ್ಡಾಗುವುದು ಸಹಜ. ಅದನ್ನು ತಡೆಗಟ್ಟಿ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಲು ಈ ವಿಧಾನವನ್ನು ಅನುಸರಿಸಿ.
ಮುಖದ ಎಣ್ಣೆಯಂಶವನ್ನು ಕಡಿಮೆ ಮಾಡಿ ತ್ವಚೆಯ ಹೊಳಪನ್ನು ಹೆಚ್ಚಿಸುವ ಫೇಸ್ ಪ್ಯಾಕ್ ಮಾಡುವ ವಿಧಾನ ತಿಳಿಯೋಣ. ಒಂದು ಚಮಚ ಅಲೋವೇರಾ ಜೆಲ್ ಗೆ ಎರಡು ಚಮಚ ಕಡಲೆ ಹಿಟ್ಟು, ಆಪಲ್ ಸೈಡ್ ವಿನೆಗರ್ ಮತ್ತು ನಿಂಬೆರಸ ಬೆರೆಸಿ. ಗಂಟಾಗದಂತೆ ಕಲಸಿ.
ನಿಂಬೆಯಿಂದ ಅಲರ್ಜಿ ಇರುವವರು ಟೊಮೆಟೊ ರಸವನ್ನು ಬಳಸಬಹುದು. ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಬಳಿಕ ರೋಸ್ ವಾಟರ್ ಹಚ್ಚಿ. ದಪ್ಪನೆಯ ಈ ಪೇಸ್ಟನ್ನು ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಮುಖ ಮಸಾಜ್ ಮಾಡುವ ವಿಧಾನದಲ್ಲೇ ಮುಖ ತೊಳೆಯಿರಿ.
ಇದರಿಂದ ನಿಮ್ಮ ಮುಖದ ಮೇಲಿರುವ ಹೆಚ್ಚುವರಿ ಜಿಡ್ಡು ದೂರವಾಗುವುದು ಮಾತ್ರವಲ್ಲ ತ್ವಚೆಗೆ ವಿಶೇಷ ಹೊಳಪು ಕೂಡಾ ಸಿಗುತ್ತದೆ. ವಾರದಲ್ಲಿ ಎರಡು ಬಾರಿ ನೀವಿದನ್ನು ಹಚ್ಚಿಕೊಳ್ಳಬಹುದು. ಕಡಲೆ ಹಿಟ್ಟು ಸ್ಕ್ರಬ್ ನಂತೆ ಕೆಲಸ ಮಾಡಿದರೆ ಅಲೋವೇರಾ ತ್ವಚೆಯ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. ಸತ್ತ ಕೋಶಗಳು ತ್ವಚೆಯಿಂದ ದೂರವಾಗುತ್ತವೆ.