ವಿಪರೀತ ಎಣ್ಣೆ ತ್ವಚೆ ಇರುವವರು ತಮ್ಮ ತ್ವಚೆಯನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಸಮಸ್ಯೆಯಿಂದ ದೂರವಿರಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ.
ಕ್ಲೆನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸಿ. ಇದು ಎಲ್ಲಾ ಕಲ್ಮಶಗಳನ್ನು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಸೋಂಕು ಬರದಂತೆ ನೋಡಿಕೊಳ್ಳುತ್ತದೆ. ಎಣ್ಣೆಯಂಶ ಇಲ್ಲದ ಫೇಸ್ ವಾಶ್ ಗಳನ್ನೇ ಬಳಸಿ.
ಒಂದು ಪಾತ್ರೆಗೆ ಬಿಸಿನೀರು ತುಂಬಿ. ಅದರ ಆವಿಗೆ ಮುಖವೊಡ್ಡಿಕೊಳ್ಳಿ. ಇದರಿಂದ ತ್ವಚೆಯ ರಂಧ್ರಗಳ ಕೊಳೆ ದೂರವಾಗುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್ ಸ್ಟೀಮರ್ ಗಳನ್ನೂ ಬಳಸಬಹುದು.
ಸ್ಕ್ರಬ್ ಮಾಡಿಕೊಂಡಾಕ್ಷಣ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತವೆ. ಆಗ ಫೇಸ್ ಪ್ಯಾಕ್ ಮಾಡಿಕೊಂಡರೆ ತ್ವಚೆ ಹೆಚ್ಚುವರಿ ಎಣ್ಣೆ ಬಿಡುಗಡೆ ಮಾಡುವುದನ್ನು ತಡೆಗಟ್ಟಬಹುದು.