alex Certify ಪದೇ ಪದೇ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ತುರ್ತು ಕಾಣಿಸಿಕೊಂಡರೆ ಈ ಪರೀಕ್ಷೆ ಮಾಡಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ತುರ್ತು ಕಾಣಿಸಿಕೊಂಡರೆ ಈ ಪರೀಕ್ಷೆ ಮಾಡಿಸಿಕೊಳ್ಳಿ

ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊಂಚ ಎಚ್ಚರ ತಪ್ಪಿದರೂ ಮಧುಮೇಹಕ್ಕೆ ಬಲಿಯಾಗುವ ಅಪಾಯವಿರುತ್ತದೆ. ಆದರೂ ಜನರು ಮಧುಮೇಹ ಪರೀಕ್ಷೆಗೆ ಒಳಗಾಗುವುದಿಲ್ಲ. ಮಧುಮೇಹದ ಲಕ್ಷಣಗಳನ್ನು ತಿಳಿದುಕೊಂಡರೆ ಬಹುಬೇಗ ಅದನ್ನು ಪತ್ತೆ ಮಾಡಬಹುದು.

ಮಧುಮೇಹವು ಗಂಭೀರ ಕಾಯಿಲೆ. ಕ್ರಮೇಣ ಇದು ದೇಹದ ಎಲ್ಲಾ ಭಾಗಗಳನ್ನು ಹಾನಿಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಧುಮೇಹದ ಆಕ್ರಮಣ…!

ಅನೇಕ ಬಾರಿ ಸಕ್ಕರೆ ಕಾಯಿಲೆ ನಮ್ಮನ್ನು ಯಾವಾಗ ಆವರಿಸಿಕೊಂಡಿದೆ ಎಂಬುದೇ ಅರಿವಾಗುವುದಿಲ್ಲ. ವ್ಯಕ್ತಿಯ ದೇಹದಲ್ಲಿ ಉಪವಾಸದ ರಕ್ತದ ಸಕ್ಕರೆಯು 100 mg/dL ಗಿಂತ ಕಡಿಮೆಯಿದ್ದರೆ ಮತ್ತು 2 ಗಂಟೆಗಳ ನಂತರ ಆಹಾರ ಸೇವನೆ ಬಳಿಕ ಸಕ್ಕರೆಯ ಮಟ್ಟವು 120 ರಿಂದ 140 mg/dL ನಡುವೆ ಇದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಈ ವ್ಯಾಪ್ತಿಯನ್ನು ಮೀರಿದಾಗ ಮಧುಮೇಹ ಬರುತ್ತದೆ. ಆದಾಗ್ಯೂ ಕೆಲವೊಮ್ಮೆ ಆಹಾರ ಪದಾರ್ಥಗಳಿಂದ ಉಪವಾಸದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ  ಮಧುಮೇಹವನ್ನು ಖಚಿತಪಡಿಸಲು HbA1c ಪರೀಕ್ಷೆಯನ್ನು ಮಾಡಬೇಕಾಗುತ್ತದೆ.

ಮಧುಮೇಹದ ಲಕ್ಷಣಗಳು

ಸಕ್ಕರೆ ಕಾಯಿಲೆಗೆ ತುತ್ತಾದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಅತಿಯಾದ ಬಾಯಾರಿಕೆ, ಅತಿಯಾದ ಹಸಿವು, ದೇಹದ ತೂಕ ಕಡಿಮೆಯಾಗುವುದು, ಕಣ್ಣಿನ ಸಮಸ್ಯೆಗಳು, ವಿಪರೀತ ಆಯಾಸ, ಒಣ ಚರ್ಮ ಮತ್ತು ಕೈಕಾಲುಗಳಲ್ಲಿ ಮರಗಟ್ಟುವಿಕೆ ಮುಂತಾದ ಹಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನೇಕ ಬಾರಿ ಮಧುಮೇಹದಿಂದಾಗಿ ಪದೇ ಪದೇ ಸೋಂಕಿಗೆ ಕೂಡ ತುತ್ತಾಗುತ್ತಾರೆ. ಗಾಯಗಳು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯು ಕಳೆದ 3 ತಿಂಗಳ ರಕ್ತದ ಸಕ್ಕರೆಯ ಸರಾಸರಿಯನ್ನು ಹೇಳುತ್ತದೆ.

HbA1c ಪರೀಕ್ಷೆಯ ಫಲಿತಾಂಶವು 5.7 ಕ್ಕಿಂತ ಕಡಿಮೆಯಿದ್ದರೆ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಸಾಮಾನ್ಯವಾಗಿದೆ ಎಂದರ್ಥ. HbA1C ಪರೀಕ್ಷೆಯ ಫಲಿತಾಂಶವು 5.7 ರಿಂದ 6.4ರ ನಡುವೆ ಇದ್ದರೆ ಪ್ರಿಡಿಯಾಬಿಟಿಸ್ ಎಂದು ಪರಿಗಣಿಸಲಾಗುತ್ತದೆ. HbA1C ಪರೀಕ್ಷೆಯ ಫಲಿತಾಂಶವು 6.5 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಸಕ್ಕರೆ ಕಾಯಿಲೆಯನ್ನು ಖಚಿತಪಡಿಸಲಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳ ಹೊರತಾಗಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು.

ಮಧುಮೇಹವು ಸಾಮಾನ್ಯ ರೋಗವಲ್ಲ. ಇದು ಅನೇಕ ರೋಗಗಳಿಗೆ ನೆಲೆಯಾಗಿದೆ. ಮಧುಮೇಹವನ್ನು ನಿರ್ಲಕ್ಷಿಸುವುದರಿಂದ ಹೃದ್ರೋಗ, ಮೂತ್ರಪಿಂಡ ವೈಫಲ್ಯ, ಕಣ್ಣಿನ ಸಮಸ್ಯೆಗಳು, ಪಾದದ ತೊಂದರೆಗಳು, ಚರ್ಮ ರೋಗಗಳು, ಹೊಟ್ಟೆ ಸಮಸ್ಯೆಗಳು ಮತ್ತು ಇತರ ಅನೇಕ ಕಾಯಿಲೆಗಳಿಗೆ ಬಲಿಯಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...