ಮನೆಯಲ್ಲಿ ನಾವು ಇಟ್ಟಿರುವ ವಸ್ತುಗಳು ಅಲ್ಲಿನ ವಾತಾವರಣದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಬಡತನ, ರೋಗಗಳು ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ. ಆದ್ದರಿಂದ ಮನೆಯಲ್ಲಿ ಈ ಅಶುಭ ವಸ್ತುಗಳಿದ್ದರೆ ತಕ್ಷಣ ತೆಗೆದು ಹಾಕಿ.
ಚಲಿಸದ ಗಡಿಯಾರ
ಕೆಟ್ಟು ನಿಂತ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೆಟ್ಟ ಸಮಯವನ್ನು ಆಹ್ವಾನಿಸಿದಂತೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಪ್ರಗತಿಗೆ ಅಡ್ಡಿಯಾಗುತ್ತದೆ. ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.
ಬೇಡದ ಪೀಠೋಪಕರಣ
ತಾಯಿ ಲಕ್ಷ್ಮಿ ಕಸ ಹಾಗೂ ಬೇಡದ ವಸ್ತುಗಳಿಂದ ತುಂಬಿರುವ ಮನೆಯಲ್ಲಿ ವಾಸಿಸುವುದಿಲ್ಲ. ಅಂತಹ ಮನೆಯಲ್ಲಿ ಹಣ ಉಳಿಯುವುದಿಲ್ಲ. ಸಂತೋಷ ಮತ್ತು ಸಮೃದ್ಧಿಯೂ ಇರುವುದಿಲ್ಲ. ಬದಲಿಗೆ ನಕಾರಾತ್ಮಕತೆ ಮತ್ತು ಬಡತನವೇ ತುಂಬಿರುತ್ತದೆ.
ಒಡೆದ ಪಾತ್ರೆಗಳು
ಮನೆಯಲ್ಲಿ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಥವಾ ಬಳಸುವುದರಿಂದ ಬೇಗನೆ ಬಡತನ ಬರಬಹುದು. ಅಂತಹ ಪಾತ್ರೆಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಕಷ್ಟಪಟ್ಟರೂ ಅಂತಹ ಮನೆಯಲ್ಲಿ ಸಮೃದ್ಧಿ ಇರುವುದಿಲ್ಲ.
ಮುಳ್ಳಿನ ಗಿಡಗಳು
ಮುಳ್ಳಿನ ಗಿಡಗಳಿರುವ ಮನೆಯಲ್ಲಿ ಮನಸ್ತಾಪ, ಉದ್ವೇಗ, ಜಗಳ, ರೋಗರುಜಿನಗಳು ಬರುವುದು ಸಾಮಾನ್ಯ. ಇದಲ್ಲದೆ ಮುಳ್ಳಿನ ಸಸ್ಯಗಳು ಆರ್ಥಿಕ ಸ್ಥಿತಿ ಮತ್ತು ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಹರಿದ ಬಟ್ಟೆ
ಅನೇಕ ಜನರು ಹರಿದ, ಹಳೆಯ, ಬಣ್ಣ ಮಾಸಿದ ಬಟ್ಟೆಗಳ ರಾಶಿಯನ್ನು ಮನೆಯಲ್ಲಿ ಇಡುತ್ತಾರೆ. ಹಾಗೆ ಮಾಡುವುದು ಅಶುಭ. ಅಂತಹ ಬಟ್ಟೆಗಳನ್ನು ಮನೆಯಿಂದ ತೆಗೆದುಹಾಕಿ. ಅವು ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತವೆ. ನೀವು ಬಳಸದ ಬಟ್ಟೆಗಳನ್ನು ಅಗತ್ಯವಿರುವವರಿಗೆ ಹಂಚುವುದು ಉತ್ತಮ.