ರಕ್ತ ದಾನ ಮಾಡುವುದರಿಂದ ದೇಹ ವಿಪರೀತ ಸುಸ್ತಾಗುತ್ತದೆ, ಹೆಚ್ಚು ಆಹಾರ ಸೇವಿಸುವ ಮೂಲಕ ಮತ್ತೆ ನೀವು ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂಬಿತ್ಯಾದಿ ತಪ್ಪು ತಿಳುವಳಿಕೆ ನಿಮ್ಮಲ್ಲೂ ಇದೆಯೇ? ಇಂದೇ ಅದನ್ನು ದೂರ ಮಾಡಿ, ರಕ್ತದಾನದ ಮಹತ್ವ ಹಾಗೂ ಲಾಭಗಳನ್ನು ತಿಳಿಯಿರಿ.
ರಕ್ತದಾನ ಮಾಡುವುದರಿಂದ ದೇಹತೂಕ ಕಡಿಮೆಯಾಗುತ್ತದೆ. ಇದರಿಂದ ಕ್ಯಾಲೊರಿಗಳು ಕರಗುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷಿಸಿಕೊಂಡು ರಕ್ತದಾನ ಮಾಡುವುದು ಅತ್ಯುತ್ತಮ ವಿಧಾನ.
ನಿಯಮಿತವಾಗಿ ರಕ್ತದಾನ ಮಾಡಿದರೆ ದೇಹದ ಕಬ್ಬಿಣಾಂಶ ಹತೋಟಿಗೆ ಬರುತ್ತದೆ. ಇದರಿಂದ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಿಂದಲೂ ಮುಕ್ತಿ ಪಡೆಯಬಹುದು.
ರಕ್ತದಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆ ಎಂಬುದನ್ನು ಸಂಶೋಧನಗಳು ಹೇಳುತ್ತವೆ. ಇವು ಸಾಕಷ್ಟು ಪ್ರಮಾಣದ ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತವೆ. ರಕ್ತದಾನ ಮಾಡಿದ 48 ಗಂಟೆಗಳ ಒಳಗೆ ನಿಮ್ಮ ದೇಹದಲ್ಲಿ ಕಳೆದು ಹೋದ ಅಷ್ಟೂ ರಕ್ತಕಣಗಳು ಮತ್ತೆ ಉತ್ಪತ್ತಿಯಾಗುತ್ತವೆ. ಹಾಗಾಗಿ ರಕ್ತದಾನ ಮಾಡಿ, ಹಲವು ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ.