ಚಳಿಗಾಲದಲ್ಲಿ ಬಹುಬೇಗ ಕಾಡುವ ಶೀತ ಜ್ವರದ ಸಮಸ್ಯೆಗಳಿಗೆ ಸೂರ್ಯನ ಕಿರಣಗಳು ಮದ್ದಾಗಬಲ್ಲವು. ಇದರಿಂದ ತ್ವಚೆಯ ಅಲರ್ಜಿ, ತುರಿಕೆಯಂಥ ಸಮಸ್ಯೆಗಳೂ ದೂರವಾಗುತ್ತವೆ.
ಚಳಿಗಾಲದಲ್ಲಿ ಕನಿಷ್ಠ ಇಪ್ಪತ್ತು ನಿಮಿಷ ಹೊತ್ತು ಬಿಸಿಲಿಗೆ ಮೈಯೊಡ್ಡಿ ನಿಲ್ಲಿ. ಇದರಿಂದ ವಿಟಮಿನ್ ಡಿ ಮಾತ್ರೆ ಸೇವನೆಗಿಂತಲೂ ಹೆಚ್ಚಿನ ಲಾಭ ನಿಮ್ಮ ದೇಹಕ್ಕೆ ಲಭಿಸುತ್ತದೆ.
ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕೀಲು ಅಥವಾ ಸಂದು ನೋವುಗಳು ಕಡಿಮೆಯಾಗುತ್ತದೆ. ನಿತ್ಯ ಬಿಸಿಲಿಗೆ ನಿಲ್ಲುವುದರಿಂದ ಮೆದುಳಿನ ಕೋಶಗಳಿಗೆ ಶಕ್ತಿ ದೊರೆತಂತಾಗುತ್ತದೆ.
ಬಿಸಿಲಿನ ಸ್ನಾನದಿಂದ ಅತ್ಯುತ್ತಮ ನಿದ್ದೆ ಪಡೆಯಬಹುದು. ಮಾನಸಿಕ ಆರೋಗ್ಯವನ್ನೂ ಇದು ಕಾಪಾಡುತ್ತದೆ. ಬೆಳಗ್ಗೆ ಒಂಬತ್ತರ ಮೊದಲಿನ ಮತ್ತು ಸಂಜೆ 4ರ ಬಳಿಕದ ಬಿಸಿಲಿಗೆ ಹತ್ತರಿಂದ ಇಪ್ಪತ್ತು ನಿಮಿಷ ಮೈಯೊಡ್ಡಿ ಕೂತರೆ ಸಾಕು, ಹಲವು ಪ್ರಯೋಜನಗಳು ನಿಮ್ಮದಾಗುವುದು ನಿಶ್ಚಿತ.