ಅಕ್ಟೋಬರ್ ತಿಂಗಳು ಮುಗಿಯುತ್ತಿದೆ. ನವೆಂಬರ್ ತಿಂಗಳು ಶುರುವಾಗಲಿದ್ದು, ನವೆಂಬರ್ ನಲ್ಲಿ ಕೆಲ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ನವೆಂಬರ್ ಶುರುವಾಗುವ ಮೊದಲೇ ಕೆಲವೊಂದು ಮಹತ್ವದ ಕೆಲಸ ಮುಗಿಸುವ ಅಗತ್ಯವಿದೆ.
ಮನೆ ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಹೌಸಿಂಗ್ ಫೈನಾನ್ಸ್ ಕಂಪನಿ ಎಚ್ಡಿಎಫ್ಸಿಯ ವಿಶೇಷ ಕೊಡುಗೆ ಈ ತಿಂಗಳು ಕೊನೆಯಾಗಲಿದೆ. ಹಬ್ಬದ ದೃಷ್ಟಿಯಿಂದ ಎಚ್ ಡಿ ಎಫ್ ಸಿ ಗೃಹ ಸಾಲದ ದರಗಳನ್ನು ಕಡಿತಗೊಳಿಸಿದೆ. ಗ್ರಾಹಕರು ವಾರ್ಷಿಕ ಶೇಕಡಾ 6.70ರ ಆರಂಭಿಕ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಬಹುದು. ಇದು ಅಕ್ಟೋಬರ್ 31ಕ್ಕೆ ಮುಗಿಯಲಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸಲು ರೈತರಿಗೆ ಅಕ್ಟೋಬರ್ 31 ರವರೆಗೆ ಸಮಯವಿದೆ. ಈಗ್ಲೇ ಹೆಸರು ನೋಂದಾಯಿಸಿದ್ರೆ ಎರಡು ಕಂತಿನ 4 ಸಾವಿರ ರೂಪಾಯಿ ಸಿಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಹಕರು ಉಚಿತವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ಎಸ್ಬಿಐ ಗ್ರಾಹಕರು ಯೋನೋ ಅಪ್ಲಿಕೇಶನ್‌ನಲ್ಲಿ ಸಲ್ಲಿಸಬಹುದು. ಇದಕ್ಕೆ ಅಕ್ಟೋಬರ್ 31 ಕೊನೆ ದಿನ.
ವಾಹನದ ನೋಂದಣಿ, ಚಾಲನಾ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣ ಪತ್ರದಂತಹ ದಾಖಲೆಗಳನ್ನು ನವೀಕರಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಹಾಗಾಗಿ ಈ ಕೆಲಸವನ್ನು ಬೇಗನೇ ಮುಗಿಸಿ.