ಕಿತ್ತಳೆ ಹಣ್ಣನ್ನು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುತ್ತವೆ. ಆದರೆ ಈ ಸಿಪ್ಪೆಯಲ್ಲಿ ಅಧಿಕವಾದ ಪೋಷಕಾಂಶಗಳಿವೆ, ಈ ಸಿಪ್ಪೆಯನ್ನು ಬಳಸಿ ನಿಮ್ಮ ಆರೋಗ್ಯ, ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಟೀ ತಯಾರಿಸಿ ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.
*ಇದನ್ನು ಸೇವಿಸುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿಯಿಂದ ದುರ್ಗಂಧ ಬರುವುದು ನಿವಾರಣೆಯಾಗುತ್ತದೆ.
*ಕಿತ್ತಳೆ ಸಿಪ್ಪೆಯ ಟೀಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
* ಜಂಕ್ ಫುಡ್ ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಕಿತ್ತಳೆ ಸಿಪ್ಪೆಯ ಟೀ ಸೇವಿಸಿ.
*ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ರೋಗನಿರೊಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಶೀತ, ಕಫದ ಸಮಸ್ಯೆ ದೂರವಾಗುತ್ತದೆ.