ಪ್ರತಿ ತಿಂಗಳು ಮಹಿಳೆಯರು ಮುಟ್ಟಿನ ನೋವಿನಿಂದ ಕಿರಿಕಿರಿ ಅನುಭವಿಸ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡುತ್ತದೆ. ಕೆಲವರಿಗೆ ಹೊಟ್ಟೆ, ಕಿಬ್ಬೊಟ್ಟೆ ನೋವು ಕಾಣಿಸಿಕೊಂಡ್ರೆ ಮತ್ತೆ ಕೆಲವರು ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ.
ಹಾಸಿಗೆಯಿಂದ ಎದ್ದು ಓಡಾಡಲು ಸಾಧ್ಯವಾಗದಷ್ಟು ನೋವು ಅನುಭವಿಸುವ ಮಹಿಳೆಯರೂ ಇದ್ದಾರೆ. ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಬಹಳಷ್ಟು ಮಹಿಳೆಯರು ಮಾತ್ರೆಯ ಮೊರೆ ಹೋಗ್ತಾರೆ.
ಮಾತ್ರೆ ಕ್ಷಣ ಮಾತ್ರದಲ್ಲಿ ನೋವನ್ನು ಕಡಿಮೆ ಮಾಡುತ್ತದೆ ನಿಜ. ಆದ್ರೆ ಮಾತ್ರೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿಯೇ ಆಹಾರ ಪದ್ಧತಿ ಬದಲಾವಣೆ ಹಾಗೂ ಮನೆ ಮದ್ದನ್ನು ಬಳಸಿ ನೋವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ.
ಮುಟ್ಟಿನ ದಿನಗಳಲ್ಲಿ ಹುಳಿ, ಮಸಾಲೆಯುಕ್ತ ಹಾಗೂ ಕರಿದ ತಿಂಡಿಗಳಿಂದ ದೂರವಿರಿ.
ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬೇಡಿ. ವ್ಯಾಯಾಮ ಮಾಡುವುದರಿಂದ ಎಂಡೋರ್ಫಿನ್ ರಾಸಾಯನಿಕ ಹೊರಗೆ ಬರುವುದರಿಂದ ನೋವು ಜಾಸ್ತಿಯಾಗುತ್ತದೆ.
ಲೈಂಗಿಕ ಚಟುವಟಿಕೆಯಿಂದ ದೂರವಿರಿ. ಮುಟ್ಟಿನ ಸಮಯದಲ್ಲಿ ಸಂಬಂಧ ಬೆಳೆಸಿದ್ರೆ ನೋವು ಜಾಸ್ತಿಯಾಗುತ್ತದೆ. ಬ್ಲೀಡಿಂಗ್ ಪ್ರಮಾಣ ಹೆಚ್ಚಾಗುವುದಲ್ಲದೆ ಮುಂದೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಶ್ರಮವನ್ನುಂಟು ಮಾಡುವ ಕೆಲಸವನ್ನು ಮಾಡಬೇಡಿ. ಭಾರ ಎತ್ತುವ ಕೆಲಸಕ್ಕೆ ಹೋಗಬೇಡಿ. ಹಾಗೆ ದೂರದೂರಿಗೆ ಪ್ರಯಾಣ ಬೆಳೆಸಬೇಡಿ.
ತಣ್ಣನೆಯ ಆಹಾರದಿಂದ ದೂರವಿರಿ. ಆದಷ್ಟು ಬೆಚ್ಚಗಿರುವ ಆಹಾರ ಸೇವಿಸಿ.
ಅಜ್ವೈನ್ ನೀರನ್ನು ಸೇವಿಸಿ. ನೀರಿಗೆ ಅಜ್ವೈನ್ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಬಿಸಿಬಿಸಿ ನೀರನ್ನು ಕುಡಿಯಿರಿ.
ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಸ್ವಲ್ಪ ಶುಂಠಿಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಜೇನು ತುಪ್ಪ ಹಾಕಿ ಸೇವನೆ ಮಾಡಿ. ಊಟದ ನಂತ್ರ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಮುಟ್ಟಿನಲ್ಲಿ ಯಾವುದೇ ನೋವು, ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.