ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಅಧಿಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದರ ಸಿಪ್ಪೆಯನ್ನು ನಾವು ವೇಸ್ಟ್ ಎಂದು ಎಸೆಯುತ್ತೇವೆ. ಆದರೆ ಇದರಿಂದ ಕೆಲವು ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
*ದಾಳಿಂಬೆ ಸಿಪ್ಪೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹಾಗಾಗಿ ಮುಖದಲ್ಲಿ ಮೊಡವೆಗಳು ಮತ್ತು ಗುಳ್ಳೆಗಳು ಮೂಡಿದ್ದರೆ ದಾಳಿಂಬೆ ಸಿಪ್ಪೆಯ ಪುಡಿಗೆ, ನಿಂಬೆ ರಸ ಅಥವಾ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.
*ದಾಳಿಂಬೆ ಸಿಪ್ಪೆಯ ಪುಡಿಯನ್ನು ಮುಖಕ್ಕೆ ನಿಯಮಿತವಾಗಿ ಬಳಸುತ್ತಾ ಬಂದರೆ ನಿಮ್ಮ ಸುಕ್ಕುಗಳನ್ನು ನಿವಾರಿಸುತ್ತದೆ.
*ಇದು ತಲೆಹೊಟ್ಟು, ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ. ಎಣ್ಣೆಗೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಬಳಿಕ ಸ್ನಾನ ಮಾಡಿ.