
ಎದೆಯುರಿ ಸಮಸ್ಯೆ ಕಾಡದವರಿಲ್ಲ. ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಬೆರೆಸಿದ ಸಿರಪ್ ಕುಡಿಯುವ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಿರಿ.
ಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರಮಾಡಲು ಶುಂಠಿ ಸೇವಿಸಿ. ಒಂದಿಂಚು ಗಾತ್ರದ ಶುಂಠಿ ತುರಿದು ಅದನ್ನು ಕುದಿಯುವ ನೀರಿಗೆ ಹಾಕಿ. ಹತ್ತು ನಿಮಿಷ ಕುದಿಯಲು ಬಿಡಿ. ಬಳಿಕ ಸೋಸಿ ಕುಡಿಯಿರಿ. ಎರಡರಿಂದ ಮೂರು ಬಾರಿ ಹೀಗೆ ಮಾಡಿದರೆ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.
ಅಡುಗೆ ಸೋಡಾ ಕೂಡಾ ಹೊಟ್ಟೆಯುಬ್ಬರದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡಾ ಬೆರೆಸಿ ಕುಡಿಯಿರಿ. ಕೆಲವರಿಗೆ ಇದರಿಂದ ವಾಕರಿಕೆ ಲಕ್ಷಣವೂ ಕಂಡು ಬಂದೀತು. ಹಾಗಾಗಿ ಖಾಲಿ ಹೊಟ್ಟೆಗೆ ಇದನ್ನು ಕುಡಿಯುವುದು ಒಳ್ಳೆಯದು.
ಹೊಟ್ಟೆಯುರಿ ಕಡಿಮೆ ಮಾಡಲು ಅಲೋವೇರಾ ಒಳಗಿನ ಜೆಲ್ ಭಾಗವನ್ನು ಜ್ಯೂಸ್ ರೂಪಕ್ಕೆ ತಂದಿಟ್ಟುಕೊಂಡು ಬಳಸಬಹುದು. ಊಟಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲು ಇದನ್ನು ಕುಡಿಯಬೇಕು. ಚೂಯಿಂಗ್ ಗಮ್ ಜಗಿಯುವುದರಿಂದಲೂ ನಿಮ್ಮ ಸಮಸ್ಯೆ ದೂರವಾಗುತ್ತದೆ.