
ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ.
ಅಧ್ಯಯನವೊಂದರ ಪ್ರಕಾರ, ಒಟ್ಟು ಆದಾಯ 60 ಸಾವಿರ ಡಾಲರ್ ಗಿಂತ ಕಡಿಮೆಯಿರುವ ವಿವಾಹಿತರಿಗಿಂತ ಹೆಚ್ಚು ದುಡಿಯುವ ಅವಿವಾಹಿತರಲ್ಲಿ ಖಿನ್ನತೆ ಕಾಡುವುದು ಹೆಚ್ಚಂತೆ. ಆದ್ರೆ ಸಂಶೋಧಕರು ಅತಿ ಹೆಚ್ಚು ಗಳಿಸುವ ವಿವಾಹಿತ ಜೋಡಿಗೆ ಇದು ಅನ್ವಯಿಸುವುದಿಲ್ಲ ಎನ್ನುತ್ತಾರೆ.
ವಿವಾಹಿತ ಹಾಗೂ 60 ಸಾವಿರ ಡಾಲರ್ ಗಿಂತ ಕಡಿಮೆ ದುಡಿಯುವ ಜೋಡಿಯಲ್ಲಿ ಖಿನ್ನತೆ ಲಕ್ಷಣ ಕಡಿಮೆಯಿತ್ತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಹೆಚ್ಚು ದುಡಿದ್ರೂ ಅವಿವಾಹಿತರಾಗಿರುವವರು ಹೆಚ್ಚು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.