alex Certify ಶುಕ್ರವಾರದಂದು ಮಹಾಲಕ್ಷ್ಮಿಯನ್ನು ಈ ಮಂತ್ರದಿಂದ ಬರಮಾಡಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಕ್ರವಾರದಂದು ಮಹಾಲಕ್ಷ್ಮಿಯನ್ನು ಈ ಮಂತ್ರದಿಂದ ಬರಮಾಡಿಕೊಳ್ಳಿ

ಲಕ್ಷ್ಮಿಯನ್ನು ಯಾವೆಲ್ಲಾ ಮಂತ್ರಗಳ ಪಠಣೆಯಿಂದ ಆರಾಧಿಸಬೇಕು ಗೊತ್ತಾ..? ಲಕ್ಷ್ಮಿ ಮಂತ್ರಗಳೊಂದಿಗೆ ಲಕ್ಷ್ಮಿಯನ್ನು ಆರಾಧಿಸಿದರೆ ಸಿರಿ, ಸಂಪತ್ತು, ಅಷ್ಟೈಶ್ವರ್ಯ ನಿಮ್ಮದಾಗುತ್ತದೆ. ಯಾವುದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೂ ಕೂಡ ಬಹುಬೇಗ ಬಗೆ ಹರಿಯುತ್ತದೆ.

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತಿ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಲಕ್ಷ್ಮಿ ಪೂಜೆ

ಕಮಲವನ್ನೇ ತನ್ನ ಆಸನವಾಗಿರಿಸಿಕೊಂಡ ಈಕೆಯನ್ನು ಪದ್ಮ, ಕಮಲ, ಪದ್ಮಪ್ರಿಯ, ಪದ್ಮಮಾಲಾಧಾರಿ ದೇವಿ, ಪದ್ಮಮುಖಿ, ಪದ್ಮಾಕ್ಷಿ, ಪದ್ಮಾಷ್ಟ, ಪದ್ಮಸುಂದರಿ ಹೀಗೆ ನಾನಾ ಹೆಸರುಗಳಿಂದ ಈಕೆಯನ್ನು ಕರೆಯಲಾಗುತ್ತದೆ. ದೀಪಾವಳಿಯಲ್ಲಿ, ಶುಕ್ರವಾರದ ದಿನ ಈಕೆಗೆ ವಿಶೇಷ ಪೂಜೆ ನೀಡಲಾಗುತ್ತದೆ. ಈ ವಿಶೇಷ ದಿನಗಳಲ್ಲಿ ಆಕೆಯನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುವುದು ಹಿಂದೂ ಧರ್ಮದಲ್ಲಿನ ನಂಬಿಕೆ. ಅದೃಷ್ಟದ ದೇವತೆಯಾದ ಲಕ್ಷ್ಮಿಯನ್ನು ಕೆಲವೊಮದು ಮಂತ್ರ, ಸ್ತೋತ್ರಗಳ ಮೂಲಕ ಹಾಡಿ ಹೊಗಳಿದರೆ ಆಕೆಯು ಪ್ರಸನ್ನಳಾಗುತ್ತಾಳೆ.

ಇಲ್ಲಿ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಕೆಲವೊಂದು ಮಂತ್ರಗಳಿವೆ. ಈ ಮಂತ್ರಗಳನ್ನು ಶ್ರದ್ಧಾ, ಭಕ್ತಿಯಿಂದ ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುವುದು. ವಿವಿಧ ರೀತಿಯ ಲಕ್ಷ್ಮಿ ಮಂತ್ರಗಳಿವೆ.

ಇಲ್ಲಿ ನಾವು ಕೆಲವೊಂದು ಪ್ರಮುಖ ಮಂತ್ರಗಳನ್ನು ಮಾತ್ರ ನೀಡಿದ್ದೇವೆ. ಹುಣ್ಣಿಮೆಯ ದಿನದಿಂದ ಲಕ್ಷ್ಮಿ ದೇವಿಗೆ ಮಂತ್ರವನ್ನು ಪಠಿಸಲು ಆರಂಭಿಸಿದರೆ ಬಹಳ ಉತ್ತಮ. ಅಂದರೆ ನಿಮ್ಮ ಮೊದಲ ಮಂತ್ರ ಪಠಣೆಯು ಹುಣ್ಣಿಮೆ ದಿನದಿಂದ ಶುರುವಾಗಲಿ. ಶುಕ್ರವಾರದಂದು ಕೂಡ ಈ ಮಂತ್ರವನ್ನು ಪಠಿಸಿದರೆ ಶುಭವಾಗುತ್ತದೆ. ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು ಮತ್ತು ಸಮೃದ್ಧಿಯು ಹೆಚ್ಚಾಗುತ್ತದೆ.

ಹಣ ಗಳಿಸುವ ಮಂತ್ರ

1) ಲಕ್ಷ್ಮಿ ಬೀಜ ಮಂತ್ರ 1:

|| ಶ್ರೀಂ ||

ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇದು ಉತ್ತಮ ಮಂತ್ರವಾಗಿದೆ. ಇದೊಂದು ಸಣ್ಣ ಪದವಾದರೂ ಕೂಡ ಅಗಾಧ ಶಕ್ತಿಯನ್ನು ಹೊಂದಿದೆ. ಮಂತ್ರಗಳಲ್ಲಿರುವ ಕ್ಲೀಂ, ಹ್ರೀಂ, ಕ್ರೀಂ ಈ ಪದಗಳಿಗಿಂತಲೂ ಶ್ರೀಂ ಎನ್ನುವ ಪದವು ಹೆಚ್ಚು ಶಕ್ತಿಶಾಲಿ ಪದವಾಗಿದೆ.

2) ಲಕ್ಷ್ಮಿ ಬೀಜ ಮಂತ್ರ 2:

|| ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ||

ಇದು ಶ್ರೀಂ ಎನ್ನುವ ಶಬ್ಧವನ್ನು ಬಳಸಿಕೊಂಡು ಹೇಳುವ ಸಂಪೂರ್ಣ ಬೀಜ ಮಂತ್ರವಾಗಿದೆ.

3) ಲಕ್ಷ್ಮಿ ಬೀಜ ಮಂತ್ರ 3:

|| ಓಂ ಶ್ರೀಂಗ್‌ ಶ್ರೀಯೇ ನಮಃ ||

ಇದು ಲಕ್ಷ್ಮಿಯನ್ನು ಆರಾಧಿಸುವ ಮತ್ತೊಂದು ಬೀಜ ಮಂತ್ರವಾಗಿದೆ. ಈಗಾಗಲೇ ಹೇಳಿರುವ ಬೀಜಮಂತ್ರಕ್ಕೂ ಈ ಬೀಜ ಮಂತ್ರಕ್ಕೂ ಇರುವ ವ್ಯತ್ಯಾಸವೇನೆಂದರೆ ಈ ಬೀಜ ಮಂತ್ರದಲ್ಲಿ ಶ್ರೀಂ ಎನ್ನುವ ಶಬ್ಧವನ್ನು ಬಳಸಲಾಗಿಲ್ಲ.

ಲಕ್ಷ್ಮಿ ಗಾಯತ್ರಿ ಮಂತ್ರ

4) ಲಕ್ಷ್ಮಿ ಮಂತ್ರ:

|| ಓಂ ಹ್ರಿಂಗ್‌ ಶ್ರಿಂಗ್‌ ಕ್ರೆಂಗ್‌ ಶ್ರಿಂಗ್‌ ಕ್ಲೆಂಗ್‌ ಕ್ಲಿಂಗ್‌ ಶ್ರಿಂಗ್‌ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್‌ ಚಿಂತಾಯೈ ಡೋರೆ ಡೋರ್ಯ್‌ ಸ್ವಾಹಃ ||

ಈ ಮಂತ್ರವನ್ನು ಹೊರಗಡೆ ಹೋಗುವಾಗ, ಕೆಲಸ ಮಾಡುವ ಸ್ಥಳಕ್ಕೆ ತೆರಳುವ ಮೊದಲು ಅಥವಾ ಯಾವುದೇ ವ್ಯವಹಾರದ ಮಾತುಕತೆಗಳಿಗೆ ಹೋಗುವ ಮೊದಲು ಪಠಿಸಬೇಕು. ಈ ಮಂತ್ರವು ನಿಮ್ಮ ಚಿಂತೆಯನ್ನು ತೆಗೆದು ಹಾಕುತ್ತದೆ ಹಾಗೂ ಸಂಪತ್ತನ್ನು ಹೆಚ್ಚಿಸುತ್ತದೆ.

5) ಲಕ್ಷ್ಮಿ ಗಾಯತ್ರಿ ಮಂತ್ರ:

|| ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ ||

ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ, ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ.

6) ಮಹಾಲಕ್ಷ್ಮಿ ಮಂತ್ರ:

|| ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ | ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ ||

ತಾಯಿ ಲಕ್ಷ್ಮಿ ದೇವಿಯ ಬಳಿ ಎಲ್ಲಾ ಸಮಸ್ಯೆಗಳಿಂದ ನನ್ನನ್ನು ಮುಕ್ತಗೊಳಿಸು. ಸಾಲದ ಭಾದೆಯಿಂದ ಕೂಡ ನನ್ನನ್ನು ಮುಕ್ತಗೊಳಿಸಿ ಧನವನ್ನು ಅಂದರೆ ಹಣವನ್ನು ಕರುಣಿಸು ಎಂದು ಬೇಡುವುದಾಗಿದೆ.

7) ತಾಂತ್ರಿಕ ಲಕ್ಷ್ಮಿ ಮಂತ್ರ:

|| ಓಂ ಶ್ರಿಂಗ್‌ ಹ್ರಿಂಗ್‌ ಕ್ಲಿಂಗ್‌ ಐಂಗ್‌ ಸಾಂಗ್ ಓಂ ಹ್ರಿಂಗ್‌ ಕಾ ಅ ಇ ಲ ಹ್ರಿಂಗ್‌ ಹ ಸ ಕ ಹ ಲ ಹ್ರಿಂಗ್‌ ಸಕಲ್‌ ಹ್ರಿಂಗ್‌ ಸೌಂಗ್‌ ಐಂಗ್‌ ಕ್ಲಿಂಗ್‌ ಹ್ರಿಂಗ್‌ ಶ್ರಿಂಗ್‌ ಓಂ ||

ಈ ಮಂತ್ರವು ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ.

ಲಕ್ಷ್ಮಿ ಸ್ತೋತ್ರ

8) ಲಕ್ಷ್ಮಿ ನರಸಿಂಹ ಮಂತ್ರ:

|| ಓಂ ಹ್ರಿಂಗ್‌ ಕ್ಷ್ರಾಂಗ್‌ ಶ್ರಿಂಗ್ ಲಕ್ಷ್ಮಿ ನರಸಿಂಗೇ ನಮಃ ||
|| ಓಂ ಕ್ಲಿಂಗ್‌ ಕ್ಷ್ರಾಂಗ್‌ ಶ್ರಿಂಗ್‌ ಲಕ್ಷ್ಮಿ ದೇವೈ ನಮಃ ||

ಈ ಮಂತ್ರದ ಮುಖಾಂತರ ನಾವು ಲಕ್ಷ್ಮಿ ದೇವಿಯೊಂದಿಗೆ ನರಸಿಂಹನನ್ನು ಕೂಡ ಆರಾಧಿಸಬಹುದಾಗಿದೆ.

9) ಏಕದಶಾಕ್ಷರ ಸಿದ್ಧಿ ಲಕ್ಷ್ಮಿ ಮಂತ್ರ:

|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್‌ ಶ್ರಿಂಗ್‌ ಸಿದ್ಧಾ ಲಕ್ಷ್ಮೈ ನಮಃ||

ಈ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಿದ್ಧವನ್ನು ತಲುಪಲು ನಿಮಗೆ ಸಹಕಾರಿಯಾಗುತ್ತದೆ.

ಈ ಮೇಲಿನ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ಕೈಯಲ್ಲಿ ಮಣಿಮಾಲೆಯನ್ನೋ ಅಥವಾ ಕಮಲದ ಬಿಜದಿಂದ ತಯಾರಿಸಿದ ಮಾಲೆಯನ್ನೋ ಹಿಡಿದು ಲಕ್ಷ್ಮಿಯನ್ನು ಆರಾಧಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ವೃದ್ಧಿಸುತ್ತದೆ.

ಭವಿಷ್ಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ದೈವಜ್ಞ ಬ್ರಾಹ್ಮಣ ಜ್ಞಾನೇಶ್ವರ್ ರಾವ್ ತಂತ್ರಿ
8548998564

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Forskellen mellem de to katte: Kun et geni kunne svare Tre overraskende produkter Et synstestspil: Kan du finde Opskriftshemmeligheder afsløres: Erstatningsmuligheder for salatprodukter "Kun 1 % af