ಭಾರತದಲ್ಲಿ ಜೇನು ಪ್ರಿಯರಿಗೆ ಕೊರತೆಯಿಲ್ಲ. ಆರೋಗ್ಯಕಾರಿ ಸಿಹಿ ಜೇನನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜು ನಿರೋಧಕ ಗುಣಗಳನ್ನು ಹೊಂದಿರುವ ಜೇನುತುಪ್ಪ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹ ಬಳಸಬಹುದು.
ಜೇನುತುಪ್ಪದ ರುಚಿ ಮಾತ್ರವಲ್ಲ ಅದರ ಔಷಧೀಯ ಗುಣಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಆಯುರ್ವೇದದಲ್ಲಿ ಕೂಡ ಜೇನುತುಪ್ಪ ಅನೇಕ ಕಾಯಿಲೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಕೆಲವು ಆರೋಗ್ಯ ತಜ್ಞರು ಜೇನುತುಪ್ಪವನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವಂತೆ ಸೂಚಿಸುತ್ತಾರೆ.
ಚರ್ಮದ ಸಮಸ್ಯೆಗಳಿಗೆ ಮದ್ದು : ಚರ್ಮದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳದೇ ಇದ್ದಾಗ ಶುಷ್ಕತೆ ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಹೊಕ್ಕುಳಿಗೆ ಜೇನುತುಪ್ಪವನ್ನು ಹಚ್ಚಿದರೆ ಕೆಲವೇ ದಿನಗಳಲ್ಲಿ ತ್ವಚೆಯು ಮೃದುವಾಗುವುದರ ಜೊತೆಗೆ ಚರ್ಮ ಹೊಳಪನ್ನೂ ಪಡೆದುಕೊಳ್ಳುತ್ತದೆ. ಜೇನುತುಪ್ಪ ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತದೆ.
ಹೊಟ್ಟೆನೋವಿಗೆ ಪರಿಹಾರ : ಜೇನುತುಪ್ಪವನ್ನು ಹೊಕ್ಕುಳಿಗೆ ಹಚ್ಚಿಕೊಳ್ಳುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಜೇನುತುಪ್ಪ ಮತ್ತು ಶುಂಠಿ ಪೇಸ್ಟ್ ಅನ್ನು ಮಿಶ್ರಣ ಮಾಡಿ ನಂತರ ಅದನ್ನು ಹೊಕ್ಕುಳ ಸುತ್ತಲೂ ಹಚ್ಚಿಬಿಡಿ. ಸ್ವಲ್ಪ ಸಮಯದಲ್ಲೇ ಹೊಟ್ಟೆನೋವು ಮಾಯವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.
ಇನ್ಫೆಕ್ಷನ್‌ನಿಂದ ಮುಕ್ತಿ : ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತವೆ. ಹಾಗಾಗಿ ಇದು ಸೋಂಕನ್ನು ತಡೆಯುತ್ತದೆ. ಇದಕ್ಕೂ ಕೂಡ ನಾವು ಹೊಟ್ಟೆ ನೋವಿಗೆ ಹೇಳಿದ ರೀತಿಯದ್ದೇ ಮಾದರಿಯನ್ನು ಅನುಸರಿಸಬೇಕು. ಶುಂಠಿ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಹೊಕ್ಕಳಿಗೆ ಹಚ್ಚಿದರೆ ಇನ್ಫೆಕ್ಷನ್ ಸಮಸ್ಯೆ ದೂರವಾಗುತ್ತದೆ.