ಮಂಗಳ ಮುಖಿಯರು ಆಶೀರ್ವಾದ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ದಾರಿ ಮಧ್ಯೆ ಕೈ ಒಡ್ಡುವ ಮಂಗಳ ಮುಖಿಯರನ್ನು ಖಾಲಿ ಕೈನಲ್ಲಿ ಕಳುಹಿಸಬಾರದು. ಕೆಲವರು ಮನೆಯ ವಿಶೇಷ ಸಮಾರಂಭಗಳಿಗೆ ಮಂಗಳ ಮುಖಿಯರನ್ನು ಕರೆಸುತ್ತಾರೆ. ಮಂಗಳ ಮುಖಿಯರು ಎದುರಿಗೆ ಬಂದಾಗ ಕೆಲವೊಂದು ಕೆಲಸವನ್ನು ಅವಶ್ಯಕವಾಗಿ ಮಾಡಬೇಕು.
ಬೆಳಿಗ್ಗೆ ಎದ್ದು ಮನೆಯಿಂದ ಹೊರ ಹೋದಾಗ ಮಂಗಳಮುಖಿ ಕಣ್ಣಿಗೆ ಬಿದ್ರೆ ಶುಭ. ಮಂಗಳ ಮುಖಿ ಹತ್ತಿರ ಬಂದಾಗ ಹಣ ನೀಡಿ ಆಶೀರ್ವಾದ ಪಡೆಯಲು ಮರೆಯಬೇಡಿ.
ಸಾಮಾನ್ಯವಾಗಿ ಮಂಗಳ ಮುಖಿಯರು ಸುಮ್ಮ ಸುಮ್ಮನೆ ಆಶೀರ್ವಾದ ನೀಡುವುದಿಲ್ಲ. ಹಣ ಪಡೆದ ಮೇಲೆ ಅವ್ರು ನೀಡುವ ಆಶೀರ್ವಾದ ಮನಸ್ಪೂರ್ವಕವಾಗಿರುತ್ತದೆ. ಒಂದೇ ವೇಳೆ ನಿಮಗೆ ಮಂಗಳ ಮುಖಿ ಆಶೀರ್ವಾದ ಸಿಕ್ಕಿದ್ರೆ ಶುಭ ಸಂಕೇತ. ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಬದಲಾಗಲಿದೆ ಎಂದರ್ಥ.
ಮಂಗಳ ಮುಖಿ ಎದುರಿಗೆ ಬಂದಾಗ ಕೈಲಾದಷ್ಟು ಹಣ ನೀಡಿ. ನಂತ್ರ ನೀವು ಕೊಟ್ಟ ಹಣವಲ್ಲ. ಅವ್ರ ಬಳಿಯಿರುವ ಒಂದು ನಾಣ್ಯವನ್ನು ಪಡೆಯಿರಿ. ಅದನ್ನು ಮನೆಗೆ ತಂದು ಹಣವಿಡುವ ಸ್ಥಳದಲ್ಲಿ ಇಡಿ. ಕೆಂಪು ಬಟ್ಟೆಯಲ್ಲಿ ಸುತ್ತಿ ಹಣವನ್ನು ಇಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ.