ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳ ಲಾಭ ಸಿಗಲಿದೆ. ಇದ್ರ ಜೊತೆ ಅನೇಕ ಕೊಡುಗೆಗಳು ಲಭ್ಯವಿದೆ. ಬ್ಯಾಂಕ್ ನಿಂದ ಗ್ರಾಹಕರಿಗೆ ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಬ್ಯಾಂಕ್ ರುಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ನೀಡ್ತಿದೆ. ಇದರಲ್ಲಿ ಆರೋಗ್ಯ ತಪಾಸಣೆ ಪ್ಯಾಕೇಜ್, ಆಕಸ್ಮಿಕ ವಿಮೆ, ದೇಶೀಯ ಮತ್ತು ಅಂತರಾಷ್ಟ್ರೀಯ ಲೌಂಜ್ ಪ್ರೋಗ್ರಾಂ ಮತ್ತು ಶಾಪಿಂಗ್ ಜೊತೆಗೆ ಕ್ಯಾಶ್ ಬ್ಯಾಕ್ ಸೇರಿದಂತೆ ಹಲವು ಸೌಲಭ್ಯಗಳು ಸಿಗ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ, ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ಬಗ್ಗೆ ಟ್ವೀಟ್ ಮಾಡಿದೆ. https://pnbcard.in/login/types6.html ನಲ್ಲಿ ನೀವು ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ರೂಪೇ ಕಾರ್ಡ್ ಮೂಲಕ 10 ಲಕ್ಷದವರೆಗೆ ಅಪಘಾತ ವಿಮೆ ಸೌಲಭ್ಯ ಸಿಗಲಿದೆ.
ಇದನ್ನು ಪಡೆಯಲು 500 ರೂಪಾಯಿ ಶುಲ್ಕ ವಿಧಿಸಬೇಕಾಗುತ್ತದೆ. ವಾರ್ಷಿಕ ಕಾರ್ಡ್ ಗೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಮೊದಲ ಬಳಕೆಯಲ್ಲಿ 300 ಕ್ಕೂ ಹೆಚ್ಚು ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿರುತ್ತವೆ. ಚಿಲ್ಲರೆ ವ್ಯಾಪಾರಿಗಳು ಡಬಲ್ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಯುಟಿಲಿಟಿ ಬಿಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಗಳು ಸಿಗಲಿದೆ. ವಿಮಾ ರಕ್ಷಣೆಯು ಲಭ್ಯವಿರುತ್ತದೆ.