alex Certify ಈ ಸರ್ಕಾರಿ ಸಂಸ್ಥೆಗೆ ನಾಮಕರಣ ಮಾಡುವ ಮೂಲಕ ನೀವು ಗಳಿಸಬಹುದು 15 ಲಕ್ಷ ರೂಪಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸರ್ಕಾರಿ ಸಂಸ್ಥೆಗೆ ನಾಮಕರಣ ಮಾಡುವ ಮೂಲಕ ನೀವು ಗಳಿಸಬಹುದು 15 ಲಕ್ಷ ರೂಪಾಯಿ..!

2021ರ ಕೇಂದ್ರ ಬಜೆಟ್​​ನಲ್ಲಿ ಕೇಂದ್ರ ಸರ್ಕಾರವು ಮೂಲಸೌಕರ್ಯಗಳಿಗೆ ಧನಸಹಾಯಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನ ರಚಿಸುವ ಯೋಜನೆಯನ್ನು ಘೋಷಣೆ ಮಾಡಿತ್ತು. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್​​​ ಅಡಿಯಲ್ಲಿ 2024-25ರ ವೇಳೆಗೆ 7000ಕ್ಕೂ ಅಧಿಕ ಇನ್ಫ್ರಾ ಯೋಜನೆಗಳಿಗೆ ಕೇಂದ್ರ ಸರ್ಕಾರವು 111 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲು ಯೋಚನೆ ಮಾಡಿದೆ.

ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಈ ಅಭಿವೃದ್ಧಿ ಹಣಕಾಸು ಸಂಸ್ಥೆಗೆ ಸೂಕ್ತವಾದ ಹೆಸರು, ಟ್ಯಾಗ್​​ಲೈನ್​ ಹಾಗೂ ಲೋಗೋ ವಿನ್ಯಾಸ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.

ಸಾರ್ವಜನಿಕರು ನೀಡುವ ಹೆಸರು, ಟ್ಯಾಗ್​ಲೈನ್​ ಹಾಗೂ ಲೋಗೋವು ಅಭಿವೃದ್ಧಿ ಹಣಕಾಸು ಸಂಸ್ಥೆ ಸ್ಥಾಪನೆಯ ಉದ್ದೇಶವನ್ನು ಪ್ರತಿನಿಧಿಸುವಂತೆ ಇರಬೇಕು.

ಈ ಸಂಸ್ಥೆಯು ಯಾವ ಕೆಲಸ ಮಾಡುತ್ತದೆ ಅನ್ನೋದು ಸ್ಪಷ್ಟವಾಗಿ ತಿಳಿಯುವಂತೆ ಇರಬೇಕು. ಅಲ್ಲದೇ ಹೆಸರುಗಳು ಉಚ್ಚರಿಸಲು ಹಾಗೂ ನೆನಪಿಟ್ಟುಕೊಳ್ಳಲು ಸುಲಭವಾಗಿರುವಂತೆ ಇರಬೇಕು ಎಂದು ಹೇಳಲಾಗಿದೆ. ಈ ಸ್ಪರ್ಧೆಗೆ ಎಂಟ್ರಿ ನೀಡಲು ಆಗಸ್ಟ್​ 15ರವರೆಗೆ ಅವಕಾಶ ನೀಡಲಾಗಿದೆ.

ಪ್ರತಿ ವಿಭಾಗದಲ್ಲಿಯೂ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನವನ್ನುನೀಡಲಾಗುತ್ತದೆ.

ಸ್ಪರ್ಧಾ ವಿಭಾಗ                ಪ್ರಥಮ                           ದ್ವಿತೀಯ                                     ತೃತೀಯ
ಹೆಸರು                          5,00,000/-                  3,00,000/-                             2,00,000/-
ಟ್ಯಾಗ್​ಲೈನ್​​                  5,00,000/-                  3,00,000/-                             2,00,000/-
ಲೋಗೋ                       5,00,000/-                3,00,000/-                             2,00,000/-

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...