ಜರ್ಮನಿ: ಆಸ್ಪತ್ರೆಯ ರೂಮ್‌ಮೇಟ್‌ನ ವೆಂಟಿಲೇಟರ್ ಅನ್ನು ಎರಡು ಬಾರಿ ಸ್ವಿಚ್ ಆಫ್ ಮಾಡಿದ ಆರೋಪದ ನಂತರ 72 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಜರ್ಮನಿಯ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ನಗರದ ಮ್ಯಾನ್‌ಹೈಮ್‌ನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನರಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಮಹಿಳೆಯನ್ನು ಜೈಲಿಗೆ ಹಾಕಲಾಗಿದೆ. ಈಕೆ ತನ್ನ ಪಕ್ಕದಲ್ಲಿ ಇರುವ 79 ವರ್ಷದ ಮಹಿಳೆಯ ವೆಂಟಿಲೇಟರ್ ಅನ್ನು ಸ್ವಿಚ್ ಆಫ್ ಮಾಡಿದ್ದಳು.
ರೋಗಿಗೆ ಇದು ಅತ್ಯಗತ್ಯ ಎಂದು ಸಿಬ್ಬಂದಿ ಹೇಳಿದ್ದರೂ, ಸಂಜೆಯ ನಂತರ ಅದನ್ನು ಮತ್ತೆ ಸ್ವಿಚ್ ಆಫ್ ಮಾಡಿದ್ದರಿಂದ ಜೈಲಿಗೆ ತಳ್ಳಲಾಗಿದೆ. ಅದರ ಶಬ್ದದಿಂದ ತನಗೆ ತೊಂದರೆಯಾಗುತ್ತಿತ್ತು. ಅದಕ್ಕಾಗಿ ಹೀಗೆ ಮಾಡಿದೆ ಎಂದು ಆರೋಪಿ ಮಹಿಳೆ ಹೇಳಿದ್ದಾಳೆ.
ಈ ಕಾರಣವನ್ನು ಒಪ್ಪದ ಕೋರ್ಟ್ ಜೈಲು ಶಿಕ್ಷೆ ನೀಡಿದೆ. ರೋಗಿಯ ಜೀವಕ್ಕೆ ಅಪಾಯವಿಲ್ಲದಿದ್ದರೂ, ಇನ್ನೂ ತೀವ್ರ ನಿಗಾ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.