
ಪ್ರಸ್ತುತ ಕರ್ನಾಟಕದಲ್ಲಿ ನೆಲೆಸಿರುವ ಜರ್ಮನ್ ನ ಜೆನಿಫರ್ ಕನ್ನಡ ಕಲಿತು ಸ್ಥಳೀಯರೊಂದಿಗೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಕನ್ನಡದಲ್ಲಿ ಮಾತನಾಡಲು ಆಕೆಗಿರುವ ಉತ್ಸಾಹ ನೋಡಿ ಜರ್ಮನ್ನರಿಗೆ ಕನ್ನಡ ಮಾತನಾಡಲು ಸಾಧ್ಯವಾದರೆ, ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷಿಕರು ಏಕೆ ಕನ್ನಡ ಕಲಿಯಲು ಮತ್ತು ಮಾತನಾಡಲು ಸಾಧ್ಯವಿಲ್ಲ?’ ಎಂದು ಪ್ರಶ್ನಿಸಲಾಗಿದೆ.
ಬೆಂಗಳೂರಿಗೆ ಬರುವ ಜನರು ಕನ್ನಡ ಮಾತನಾಡದಿದ್ದರೆ ಅಥವಾ ಕಲಿಯಲು ಪ್ರಯತ್ನಿಸಿದರೆ ಅವರನ್ನು ಹೊರಗಿನವರೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
