ಬಿಹಾರದ ಬಕ್ಸರ್ ಜಿಲ್ಲೆಯ ಮುಫಾಸಿಲ್ ಠಾಣೆಯ ಪೊಲೀಸರು ಜರ್ಮನ್ ಶಫರ್ಡ್ ನಾಯಿಯೊಂದನ್ನು ಮದ್ಯ ನಿಷೇಧ ಕಾನೂನಿನ ಅಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಈ ನಾಯಿ ಮದ್ಯ ಸಾಗಿಸುತ್ತಿರಲಿಲ್ಲ ಅಥವಾ ಅದನ್ನು ಸೇವಿಸಿರಲೂ ಇಲ್ಲ. ಮಾಲೀಕರು ಮಾಡಿದ ತಪ್ಪಿಗೆ ಈ ನಾಯಿ ಠಾಣೆ ಮೆಟ್ಟಿಲೇರುವಂತಾಗಿದೆ.
ಜುಲೈ 6 ರಂದು ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಗಾಜಿಪುರದಿಂದ ಬರುತ್ತಿದ್ದ ಎಸ್ಯುವಿ ಒಂದನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಕಾರಿನಲ್ಲಿ ಆರು ಮದ್ಯದ ಬಾಟಲುಗಳು ಪತ್ತೆಯಾಗಿದ್ದವು.
ಬಿಹಾರದಲ್ಲಿ ಮದ್ಯಪಾನ ನಿಷೇಧವಿದ್ದು, ಹೀಗಾಗಿ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಜರ್ಮನ್ ಶಫರ್ಡ್ ನಾಯಿಯೂ ಇದ್ದು, ಅದು ಕೂಡ ಈಗ ಪೊಲೀಸರ ವಶದಲ್ಲಿದೆ.
ಮದುವೆಯಾದ ಬಳಿಕ ಜೀನ್ಸ್ ಧರಿಸಲು ಬಿಡದಿದ್ದಕ್ಕೆ ಪತಿಯನ್ನು ಇರಿದು ಕೊಂದ ಪತ್ನಿ….!
ಆ ನಾಯಿಯನ್ನು ಠಾಣೆಯಲ್ಲಿ ಇಟ್ಟುಕೊಂಡಿರುವ ಪೊಲೀಸರು ಈಗ ಪರಿತಪಿಸುತ್ತಿದ್ದು, ಇದನ್ನು ಸಾಕುವುದು ಬಲು ದುಬಾರಿ ಎಂದು ಗೊಣಗುತ್ತಿದ್ದಾರೆ. ಅಷ್ಟೇ ಅಲ್ಲ ನಾಯಿಗೆ ಇಂಗ್ಲಿಷ್ ಮಾತ್ರ ಅರ್ಥವಾಗುತ್ತೆ ಎನ್ನಲಾಗಿದ್ದು, ಹೀಗಾಗಿ ಇಂಗ್ಲಿಷ್ ಬಲ್ಲ ಸ್ಥಳೀಯರೊಬ್ಬರ ಸಹಾಯ ಪಡೆಯಲಾಗಿದೆ.