ಮಾಡೆಲ್ ಮತ್ತು ಸೋಷಿಯಲ್ ಮೀಡಿಯಾದ ಪ್ರಭಾವಿ ಎನಿಸಿಕೊಂಡಾಕೆ ತನ್ನ ಕುದುರೆಯ ಎಳೆತಕ್ಕೆ ಸಿಲುಕಿ ಅನ್ ಜಿಪ್ ಆದ ವಿಚಿತ್ರ ಪರಿಸ್ಥಿತಿಯ ವಿಡಿಯೋ ವೈರಲ್ ಆಗಿದೆ.
ಜರ್ಮನ್ ಮಾಡೆಲ್ ಆಗಸ್ಟೀನ್ ಜಾಲತಾಣದಲ್ಲಿ ಲಕ್ಷಾಂತರ ಫಾಲೋಯರ್ ಹೊಂದಿದ್ದಾರೆ. ಆಕೆ ಇತ್ತೀಚೆಗೆ ತನ್ನ ಕುದುರೆಯೊಂದಿಗೆ ಇರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಕುದುರೆಯನ್ನು ಪ್ರೀತಿಯಿಂದ ಮುದ್ದಿಸುತ್ತಿದ್ದಾಗ ಅದು ಆಕೆಯ ಟಾಪ್‌ನ ಜಿಪ್ ಅನ್ನು ಎಳೆದಿದೆ. ಅನಿರೀಕ್ಷಿತವಾಗಿ ಜಿಪ್ ಎಳೆದಿದ್ದು, ಈ ವೇಳೆ ಆಕೆಗೂ ನಗು ಬಂದಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟಿಕ್‌ಟಾಕ್‌ನಲ್ಲಿ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ.
ಆಕೆ ವಿಡಿಯೋವನ್ನು ತುಂಬಾ ತಮಾಷೆಯಾಗಿ ಕಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ವೆಬ್ ಸೈಟ್‌ಗಳು ಹಂಚಿಕೊಂಡಿವೆ.
ಇನ್ ಸ್ಟಾದಲ್ಲಿ ಆಕೆ ಮಾಡಿದ ಪೋಸ್ಟ್ 68,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು 38 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.