ನಿಮ್ಮ ಕಂಪೆನಿಯೊಂದಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿ ಯಾರಾದರೂ ಸಹಾಯ ಮಾಡಿದರೆ ಆತನಿಗೆ ನೀವೇನು ಮಾಡಬಹುದು? ಒಂದಿಷ್ಟು ಹಣದ ಸಹಾಯವನ್ನೋ ಇಲ್ಲವೇ ಇನ್ನಾವುದಾದರೂ ದುಬಾರಿ ಗಿಫ್ಟ್ ನೀಡಬಹುದು ಅಲ್ಲವೆ? ಆದರೆ ಇಲ್ಲೊಂದು ವಿಲಕ್ಷಣ ಘಟನೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗುವುದನ್ನು ತಪ್ಪಿಸಿದ ವ್ಯಕ್ತಿಗೆ ಆರು ಚೀಲದಷ್ಟು ಚಾಕೊಲೆಟ್ ನೀಡಿರುವ ಘಟನೆ ನಡೆದಿದೆ.
ಜರ್ಮನ್ ವ್ಯಕ್ತಿ ಹರಿಬೋ ಎನ್ನುವವರು ತಮಗಾಗಿರುವ ನೋವಿನ ಅನುಭವನ್ನು ಹಂಚಿಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ರಾಂಕ್‌ಫರ್ಟ್‌ನ ರೈಲು ನಿಲ್ದಾಣದ ಬಳಿ ಹೋಗುತ್ತಿದ್ದಾಗ ಅವರಿಗೆ ಚೆಕ್ ಒಂದು ಕಂಡಿದೆ. ನಂತರ ಅದನ್ನು ನೋಡಿದಾಗ ಜರ್ಮನ್ ಮಿಠಾಯಿ ಕಂಪನಿ ಹರಿಬೋಗೆ $ 4.7 ಮಿಲಿಯನ್ (ಸುಮಾರು 38 ಕೋಟಿ ರೂಪಾಯಿ) ಚೆಕ್ ಎಂದು ಕಂಡು ಅವರು ಆಘಾತಕ್ಕೊಳಗಾದರು. ಅದನ್ನು ಯಾರು ಬೇಕಾದರೂ ಸುಲಭದಲ್ಲಿ ಬ್ಯಾಂಕ್ಗೆ ಹಾಕಿ ಹಣ ಪಡೆಯಬಹುದಿತ್ತು.
ಆದರೆ ಹರಿಬೋ ಕಂಪನಿಯನ್ನು ಸಂಪರ್ಕಿಸಿ ಆ ಬಗ್ಗೆ ತಿಳಿಸಿದರು. ನಂತರ ಇಷ್ಟು ಬೃಹತ್ ಮೊತ್ತ ನಷ್ಟವಾಗುವುದನ್ನು ತಪ್ಪಿಸಿದರು. ಇದಕ್ಕೆ ಪ್ರತಿಯಾಗಿ ಕಂಪೆನಿಯು ಅವರಿಗೆ ಆರು ಚೀಲ ಕರಡಿ ಆಕೃತಿಯ ಚಾಕೋಲೆಟ್ ಬಹುಮಾನವಾಗಿ ನೀಡಿತು.
ಎಂತೆಂಥ ಜನರು ಇರುತ್ತಾರೆ. ಕೋಟ್ಯಂತರ ರೂಪಾಯಿ ಉಳಿಸಿದರೆ ಕೆಲವೇ ನೂರು ರೂಪಾಯಿ ಬಾಳುವ ಇದನ್ನು ನನಗೆ ನೀಡಿದ್ದು ಇದರಿಂದ ಪ್ರಯೋಜನವಾದರೂ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬೋ ಬರೆದುಕೊಂಡಿದ್ದು, ಕಂಪೆನಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಹೀಗೆ ಕಂಪೆನಿಯ ಮರ್ಯಾದೆ ಜಾಲತಾಣದಲ್ಲಿ ಹೋಗುತ್ತಿದೆ.