ಕೇರಳದ ಕಡಲ ತೀರವೊಂದರಲ್ಲಿ ಹರಡಿದ್ದ ತ್ಯಾಜ್ಯವನ್ನ ಜರ್ಮನಿಯ ವ್ಯಕ್ತಿಯೊಬ್ಬರು ಕ್ಲೀನ್ ಮಾಡಿದ್ದಾರೆ. ಈ ವಿಡಿಯೋವನ್ನ ನಟ ರೆಹಮಾನ್ ಹಂಚಿಕೊಂಡಿದ್ದಾರೆ.
ಅನಗತ್ಯ ಪ್ಲಾಸ್ಟಿಕ್ ಬಾಟಲಿಗಳು ಮತ್ತು ತ್ಯಾಜ್ಯ ವಸ್ತುಗಳು ಪರಿಸರ ಸೇರಿದಾಗ ಮಾಲಿನ್ಯವಾಗುತ್ತದೆ. ಎಲ್ಲೆಂದರಲ್ಲಿ ಕಸ ಹಾಕದಿರುವುದು ಗಂಭೀರ ಕಾಳಜಿಯಾಗಿಯಾಗಿದೆ. ಕೇರಳದ ಆಡಳಿತ ಮತ್ತು ಜನರು ಕಡಲ ತೀರಗಳಲ್ಲಿ ಸಂಗ್ರಹವಾದ ತ್ಯಾಜ್ಯದ ರಾಶಿಯನ್ನ ತೆಗೆಯುವ ಬಗ್ಗೆ ಗಮನ ಕೊಡುತ್ತಿಲ್ಲವೆಂದು ಜರ್ಮನಿಯ ವ್ಯಕ್ತಿಯೊಬ್ಬರು ಸ್ವತಃ ದಡವನ್ನು ಸ್ವಚ್ಛಗೊಳಿಸಿದ್ದಾರೆ.
ಕಡಲತೀರವನ್ನು ಸ್ವಚ್ಛಗೊಳಿಸುವ ವ್ಯಕ್ತಿಯ ಪ್ರಯತ್ನವನ್ನು ಒಳಗೊಂಡಿರುವ ವೀಡಿಯೊವನ್ನು ಮಲಯಾಳಂ ನಟ ರೆಹಮಾನ್ ಹಂಚಿಕೊಂಡಿದ್ದಾರೆ.
ಜರ್ಮನ್ ಮೂಲದ ವ್ಯಕ್ತಿ ಏಕಾಂಗಿಯಾಗಿ ದಡಕ್ಕೆ ಹೋಗಿ ತ್ಯಾಜ್ಯವನ್ನು ಗುಡಿಸುವ ಬಗ್ಗೆ ವಿಡಿಯೋದಲ್ಲಿ ತಿಳಿಸಲಾಗಿದೆ.
https://www.youtube.com/watch?v=ufXDNa_375M