ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ಇತಿಹಾಸವನ್ನು ಬರೆದಿದೆ. ಜನರು ಈ ಹಾಡಿಗೆ ಡಾನ್ಸ್ ಮಾಡಲು ಆರಂಭಿಸಿದ್ದು, ಈ ಹಾಡಿನ ಹಲವಾರು ವೀಡಿಯೊಗಳು ಇಂಟರ್ನೆಟ್‌ನಲ್ಲಿ ಸುತ್ತುತ್ತಿವೆ.
ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿಯ ನಂತರ, ಜರ್ಮನ್ ರಾಯಭಾರಿ ಕಚೇರಿಯ ರಾಯಭಾರಿ ಮತ್ತು ಸಿಬ್ಬಂದಿ ಈ ಹಾಡಿಗೆ ಡಾನ್ಸ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಇದನ್ನು ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಚಿತ್ರೀಕರಿಸಿರುವುದು ವಿಶೇಷ.
ಇದೀಗ ವೈರಲ್ ಆಗಿರುವ ವೀಡಿಯೋವನ್ನು ಡಾ. ಫಿಲಿಪ್ ಅಕರ್‌ಮನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
2 ನಿಮಿಷಗಳ ಕ್ಲಿಪ್‌ನಲ್ಲಿ, ಅಕರ್‌ಮನ್ ನೀಲಿ ಕುರ್ತಾವನ್ನು ಧರಿಸಿ ಚಾಂದಿನಿ ಚೌಕ್‌ನ ಲೇನ್‌ಗಳಲ್ಲಿ ಅಡ್ಡಾಡುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಒಬ್ಬ ವ್ಯಕ್ತಿ ನಾಟು ನಾಟು ಹಾಡಿನ ಮೂಡ್ ತರಿಸುತ್ತಾನೆ.
ನಂತರ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಚಾಂದಿನಿ ಚೌಕ್‌ನ ವಿವಿಧ ಮೂಲೆಗಳಿಂದ ಬೀದಿಗಿಳಿಯಲು ಬಂದು ನೃತ್ಯ ಮಾಡುವುದನ್ನು ನೋಡಬಹುದು.
https://twitter.com/siddarth_jain/status/1637315660811489280?ref_src=twsrc%5Etfw%7Ctwcamp%5Etweetembed%7Ctwterm%5E1637315660811489280%7Ctwgr%5E3a505936255b0f6dee8581b5556dbb736314fc39%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fgerman-embassy-ambassador-staff-dance-to-naatu-naatu-in-delhis-chandni-chowk-video-is-viral-2348727-2023-03-19