ಬರ್ಲಿನ್: ಜರ್ಮನಿಯ ಗೋಟಿಂಗನ್ ನಗರದ ಸಾರ್ವಜನಿಕ ಕೊಳಗಳಲ್ಲಿ ಪುರುಷರು ಮಾತ್ರವಲ್ಲದೆ, ಮಹಿಳೆಯರು ಟಾಪ್‌ಲೆಸ್ ಆಗಿ ಈಜಲು ಶೀಘ್ರದಲ್ಲೇ ಅನುಮತಿ ನೀಡಲಿದೆ !
ನಗರದ ಈಜುಕೊಳವೊಂದರಲ್ಲಿ ಲಿಂಗ ತಾರತಮ್ಯದ ವಿವಾದವು ಭುಗಿಲೆದ್ದ ಬೆನ್ನಲ್ಲೇ ಸ್ಥಳೀಯ ಆಡಳಿತವು ಇಂತಹ ಕ್ರಮಕ್ಕೆ ಮುಂದಾಗಿದೆ. ಮಹಿಳೆಯು ತನ್ನ ಎದೆಯನ್ನು ಮುಚ್ಚಿಕೊಳ್ಳುವಂತೆ ಈಜುಗಾರನೊಬ್ಬ ಸೂಚಿಸಿದ್ದ. ಇದನ್ನು ಆ ಮಹಿಳೆ ಪ್ರತಿಭಟಿಸಿದ್ದಳು.
ಈ ಹಿನ್ನೆಲೆಯಲ್ಲಿ ಕೇಂದ್ರ ಜರ್ಮನಿಯ ಗೋಟಿಂಗನ್ ನಗರದ ಲೋವರ್ ಸಕ್ಸೋನಿ ಎಂಬಲ್ಲಿನ ಕ್ರೀಡಾ ಸಮಿತಿಯು ವ್ಯಕ್ತಿಯನ್ನು ಈಜುಕೊಳದಿಂದ ಬಹಿಷ್ಕರಿಸಿದ್ದಲ್ಲದೆ, ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳದೆ ಈಜಲು ಅನುವು ಮಾಡಿಕೊಡುವ ನಿರ್ಧಾರ ಕೈಗೊಂಡಿತು.
BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ
ಒಳಾಂಗಣ ಮಾತ್ರವಲ್ಲದೆ ಹೊರಾಂಗಣದಲ್ಲೂ ಮಹಿಳೆಯರು ಮುಕ್ತವಾಗಿ ಈಜಲು ಅವಕಾಶ ಮಾಡಿಕೊಡುವ ಮೂಲಕ ಗೋಟಿಂಗನ್ ನಗರವು ಇತಿಹಾಸದಲ್ಲಿ ದಾಖಲಾಗಲಿದೆ. ಆರಂಭದಲ್ಲಿ, ಪರೀಕ್ಷಾರ್ಥವಾಗಿ ಮೇ 1ರಿಂದ ವಾರಾಂತ್ಯದಲ್ಲಿ ಮಾತ್ರ ಮಹಿಳೆಯರು ಟಾಪ್‌ಲೆಸ್ ಆಗಿ ಈಜಲು ಅವಕಾಶ ನೀಡಲಾಗಿದೆ. ಆ.31 ರ ವರೆಗೆ ಹಂತ ಹಂತವಾಗಿ ಈ ಆವರ್ತನಗಳನ್ನು ಹೆಚ್ಚಿಸಲಾಗುವುದು.
ಸಾರ್ವಜನಿಕವಾಗಿ ಬೆತ್ತಲಾಗಿ ಓಡಾಡುವುದು ಜರ್ಮನಿಯಲ್ಲಿ ಅಂತಹ ಗಂಭೀರ ಅಪರಾಧವೇನಲ್ಲ. ಬೀಚ್‌ಗಳಲ್ಲಿ ಮತ್ತು ಪರಿಸರದ ಮಡಿಲಲ್ಲಿ ಮಹಿಳೆಯರು ಬೆತ್ತಲಾಗಿ ಓಡಾಡುವುದು ಯಾರ ಕಣ್ಣನ್ನೂ ಕುಕ್ಕುವುದಿಲ್ಲ. ಎಫ್‌ಕೆಕೆಯಂತಹ ಬೆತ್ತಲೆ ಚಳವಳಿಗಳೂ ಜರ್ಮನಿಯಲ್ಲಿ ನಡೆದಿವೆ.