ಭಾರತ ಮತ್ತು ಭೂತಾನ್‌ನ ಜರ್ಮನ್ ರಾಯಭಾರಿ ಡಾ. ಫಿಲಿಪ್ ಅಕರ್‌ಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್‌ಮಸ್ ಶುಭಾಶಯ ಹೇಳಿದ್ದಾರೆ. ಶುಭಾಶಯ ಹೇಳಿರುವುದು ಸ್ವಲ್ಪ ಡಿಫರೆಂಟ್ ಆಗಿರುವ ಹಿನ್ನೆಲೆಯಲ್ಲಿ ಇದೀಗ ವೈರಲ್ ಆಗಿದೆ.
ಅಷ್ಟಕ್ಕೂ ಡಾ.ಫಿಲಿಪ್ ಅವರು ಪೂರ್ಣ ‘ದೆಹಲಿ’ ಶೈಲಿಯಲ್ಲಿ ಶುಭಾಶಯ ಕೋರಿದ್ದಾರೆ. ಅದು ಹೀಗೆ: ಒಂದು ಕೈಯಲ್ಲಿ ಒಂದು ಕಪ್ ಚಾಯ್ ಹಿಡಿದಿರುವುದು ಟ್ವಿಟರ್‌ನಲ್ಲಿ ನೋಡಬಹುದು. ಹಿನ್ನೆಲೆಯಲ್ಲಿ ಒಂದು ರಿಕ್ಷಾ ಇದೆ. ದೆಹಲಿಯ ಚಳಿಗಾಲವನ್ನು ಆಚರಿಸಲು ನಾನು ಸ್ವಲ್ಪ ಚಹಾ ಮತ್ತು ಮತ್ತಿಯೊಂದಿಗೆ ಇಲ್ಲಿ ನಿಂತಿದ್ದೇನೆ ಎಂದು ಅವರು ಹೇಳಿದ್ದಾರೆ.
ಜರ್ಮನಿಯ ಕ್ರಿಸ್ಮಸ್ ಹವಾಮಾನವು ನಿಖರವಾಗಿಲ್ಲ. ಹೊರಗೆ ಬೆಚ್ಚಗಿರುತ್ತದೆ ಮತ್ತು ಬಿಸಿಲು ಇರುತ್ತದೆ. ಹಿಮ ಮತ್ತು ಗ್ಲುಹ್ವೀನ್ (ವೈನ್) ಇಲ್ಲದಿದ್ದರೂ ಸಹ, ರಜಾದಿನವು ಬರುತ್ತದೆ ಎಂದು ಫಿಲಿಪ್ ಹೇಳಿದ್ದಾರೆ. ಇದರ ಅರ್ಥ ಕ್ರಿಸ್‌ಮಸ್‌ನಲ್ಲಿ ಶುಭ ಕೋರುವಾಗ ಸಾಮಾನ್ಯವಾಗಿ ಹಿಡಿಯುವ ವೈನ್ ಬದಲು ಚಹಾ ಹಿಡಿದಿದ್ದಾರೆ. ಇದೇ ಕಾರಣಕ್ಕೆ ಇವರ ಟ್ವೀಟ್ ವೈರಲ್ ಆಗಿದೆ.