ಭಾರತೀಯರಿಗೆ ಖರೀದಿಯನ್ನು ಸುಲಭ ಮಾಡಿಕೊಟ್ಟಂಥ ಒಂದು ವರ್ಷದ ಸಂಭ್ರಮಾಚರಣೆ ಜಿಯೋಮಾರ್ಟ್- ಮೆಟಾದಿಂದ ನಡೆಯುತ್ತಿದೆ. ಜಿಯೋಮಾರ್ಟ್ ಮತ್ತು ವಾಟ್ಸಾಪ್ (ಮೆಟಾದ ಒಡೆತನ ಇರುವಂಥದ್ದು) ಸಹಯೋಗವು ದೇಶೀಯ ರೀಟೇಲ್ ಷೇತ್ರದಲ್ಲಿ ಅತ್ಯಂತ ಯಶಸ್ವಿ ಪಾಲುದಾರಿಕೆ ಎಂಬುದು ಸಾಬೀತಾಗಿದೆ.
ಭಾರತದ ಪ್ರಮುಖ ಇ-ಮಾರ್ಕೆಟ್ ಪ್ಲೇಸ್ ಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ ಒಡೆತನದ ಜಿಯೋಮಾರ್ಟ್, ವಾಟ್ಸಾಪ್ ಮೂಲಕ ಆರ್ಡರ್‌ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಮತ್ತು ಪೂರೈಸಿದೆ. ವಾಟ್ಸಾಪ್ ಚಾಟ್ ಸೇವೆಗಳ ಮೂಲಕ ಗ್ರಾಹಕರು ತಮ್ಮ ಮನೆಯ ಅಗತ್ಯಗಳಿಗಾಗಿ ಸರಳವಾಗಿ ಬ್ರೌಸ್ ಮತ್ತು ಶಾಪಿಂಗ್ ಮಾಡಲು ಈ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ.
ಮೆಟಾ ಜೊತೆಗಿನ ಪಾಲುದಾರಿಕೆಯೊಂದಿಗೆ ಜಿಯೋಮಾರ್ಟ್ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಾಟ್ಸಾಪ್ ಮೂಲಕ ಬರುವಂಥ ಮಾಸಿಕ ಆರ್ಡರ್‌ಗಳಲ್ಲಿ ಏಳು ಪಟ್ಟು ಬೆಳವಣಿಗೆಯನ್ನು ಕಂಡಿದೆ. ಗ್ರಾಹಕರಿಗೆ ಏನು ಬೇಕೋ ಎಲ್ಲವೂ, ಅಂದರೆ ವಾಟ್ಸಾಪ್ ನಲ್ಲಿಯೇ ಶಾಪಿಂಗ್ ಅನುಭವ ಪಡೆಯುವುದರೊಂದಿಗೆ ಜಿಯೋಮಾರ್ಟ್ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಹಿಂಜರಿಯುವ ಗ್ರಾಹಕರಿಗೆ ನೆರವಾಗುತ್ತದೆ. ಪ್ಲಾಟ್‌ಫಾರ್ಮ್‌ನ ಬಳಕೆದಾರ ಸ್ನೇಹಿ ಕಾರ್ಯಚಟುವಟಿಕೆಯು ಜಿಯೋಮಾರ್ಟ್-ಆನ್-ವಾಟ್ಸಾಪ್ ನಲ್ಲಿ (JioMart-on-WhatsApp) ನಲ್ಲಿ ಹೊಸ ಗ್ರಾಹಕರು ಬರುವುದನ್ನು ತಿಂಗಳ ಲೆಕ್ಕದಲ್ಲಿ ಆರು ಪಟ್ಟು ಬೆಳವಣಿಗೆ ಕಾಣುವಂತೆ ಮಾಡಿದೆ.
ಕಳೆದ ವರ್ಷ, ಜಾಗತಿಕವಾಗಿ ಮೊದಲು ಉತ್ಪನ್ನದ (global-first product) ಅನುಭವದ ಉಪಕ್ರಮದಲ್ಲಿ, ಜಿಯೋ ಪ್ಲಾಟ್‌ಫಾರ್ಮ್‌ಗಳು ಜಿಯೋಮಾರ್ಟ್-ಆನ್-ವಾಟ್ಸಾಪ್ ಅನ್ನು ನೀಡಲು ಮೆಟಾದೊಂದಿಗೆ ಪಾಲುದಾರಿಕೆ ಹೊಂದಿದ್ದವು. ಜಿಯೋಮಾರ್ಟ್-ಆನ್-ವಾಟ್ಸಾಪ್ ಅನುಭವವು ದೇಶದಾದ್ಯಂತ ಲಕ್ಷಾಂತರ ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ರೀತಿಯಲ್ಲಿ ಕ್ರಾಂತಿಕಾರಿಯಾಗಿದೆ ಮತ್ತು ಜನರ ಖರೀದಿ ಅನುಭವಕ್ಕೆ ಊಹೆಗೆ ನಿಲುಕದಷ್ಟು ಸರಳತೆ ಮತ್ತು ಅನುಕೂಲತೆಯನ್ನು ತರುತ್ತದೆ.