ಆನೆಗಳೆಂದ್ರೆ ಮುಗ್ಧ ಪ್ರಾಣಿಗಳು. ಜೀವ ದೈತ್ಯವಾಗಿದ್ದರೂ ಸಹ ಬಹಳ ಸೌಮ್ಯ ಸ್ವಭಾವದ ಜೀವಿಗಳಾಗಿವೆ. ತನಗೇನು ಮಾಡದಿದ್ರೆ, ಇವುಗಳು ಯಾರ ಉಪದ್ರಕ್ಕೂ ಹೋಗುವುದಿಲ್ಲ. ಇದೀಗ ಕಾಡಾನೆಯೊಂದು ವ್ಯಕ್ತಿ ಮೇಲೆ ಮಣ್ಣು ಎರಚಿರುವ ವಿಡಿಯೋ ವೈರಲ್ ಆಗಿದೆ. ಶ್ರೀಲಂಕಾದಲ್ಲಿ ನಡೆದ ಘಟನೆ ಇದಾಗಿದೆ. ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮ್ಮ ಮೊಗದಲ್ಲಿ ನಗು ತರಿಸದೆ ಇರಲಾರದು.
ಆನೆಯು ವಾಸ್ತವವಾಗಿ ಯಾಲಾ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಜೆಟ್ವಿಂಗ್ ಯಾಲಾ ಹೋಟೆಲ್‌ನಲ್ಲಿ ನಡೆಯುತ್ತಾ ಸಾಗಿದೆ. ವರದಿಯ ಪ್ರಕಾರ, ಏಷ್ಯನ್ ಬುಲ್ ಆನೆ 2013 ರಿಂದ ಹೋಟೆಲ್‌ನ ಅತ್ಯಂತ ನಿಷ್ಠಾವಂತ ಆನೆಯಾಗಿದೆ.
ನಟ್ಟ ಕೋಟಾ ಹೆಸರಿನ ಆನೆಯು ಹೋಟೆಲ್‌ಗೆ ಆಗಾಗ ಭೇಟಿ ನೀಡುತ್ತದೆ. ಕಡಲತೀರದ ಉದ್ದಕ್ಕೂ ಇರುವ ಇತರ ರೆಸಾರ್ಟ್‌ಗಳಿಗೆ ಕೂಡ ಈ ಆನೆ ಆಗಾಗ್ಗೆ ಭೇಟಿ ನೀಡುತ್ತಿತ್ತು. ಕೆಲವು ವರ್ಷಗಳ ಹಿಂದೆ, ನಟ್ಟ ಕೋಟಾ ಆನೆಯು ಜೆಟ್ವಿಂಗ್ ಹೋಟೆಲ್‌ನಲ್ಲಿ ಶಾಶ್ವತ ನಿವಾಸವನ್ನು ಪಡೆದಿದೆ. ಅಲ್ಲಿ ಅದು ಪೊದೆಗಳ ನೆರಳಿನಲ್ಲಿ ಮಲಗುತ್ತದೆ. ಮತ್ತು ಹೋಟೆಲ್‌ನ ಫುಟ್‌ಪಾತ್‌ಗಳಲ್ಲಿ ನಡೆಯುತ್ತಾ ಸಾಗುತ್ತದೆ.
ಈ ಆನೆಯು ಬಹಳ ಶಾಂತ ಸ್ವಭಾವವಾಗಿದ್ದು, ಇದರ ವರ್ತನೆಯು ಅತಿಥಿಗಳಿಗೆ ಸಂತೋಷವನ್ನುಂಟು ಮಾಡಿದೆ. ಕೆಲವೊಮ್ಮೆ ಆನೆಯು ಕಾರುಗಳಿಂದ ಹಣ್ಣುಗಳನ್ನು ಮತ್ತು ಹೋಟೆಲ್ ಅಡುಗೆಮನೆಯಿಂದ ಆಹಾರ ಸಾಮಗ್ರಿಗಳನ್ನು ಕದಿಯುತ್ತದೆ. ಹಾಗಂತ ಹೋಟೆಲ್ ಸಿಬ್ಬಂದಿಯೇನು ಅದನ್ನು ಶಿಕ್ಷಿಸುವುದಿಲ್ಲ. ಬದಲಾಗಿ ಆತನನ್ನು ದೂರ ಇಡಲು ಅಡುಗೆ ಮನೆಯ ಮುಂದೆ ಬೇಲಿ ಹಾಕಿದ್ದಾರೆ.
ಇದೀಗ ನಟ್ಟ ಕೋಟಾದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ‘ಬ್ಯುಟೆಂಗೆಬೀಡೆನ್’ ಪುಟವು ಹಂಚಿಕೊಂಡಿದೆ. ಆನೆಯು ಶಾಂತವಾಗಿ ಫುಟ್ ಪಾತ್ ನಲ್ಲಿ ನಡೆಯುತ್ತಾ ಸಾಗಿದೆ. ಈ ವೇಳೆ ಅಡ್ಡ ಬಂದ ವ್ಯಕ್ತಿಯನ್ನು ಪಕ್ಕಕ್ಕೆ ಸರಿಸಲು ನಿಧಾನವಾಗಿ ಮಣ್ಣನ್ನು ಆತನ ಮೇಲೆ ಎರಚುತ್ತದೆ. ಕೂಡಲೇ ಆ ವ್ಯಕ್ತಿ ದೂರ ಸರಿಯುತ್ತಾನೆ. ಬಳಿಕ ಆನೆಯು ತನ್ನ ಪಾಡಿಗೆ ತಾನು ಮುಂದೆ ಸಾಗಿದೆ.
ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಅದೇ ಆನೆ ಹೋಟೆಲ್‌ನಲ್ಲಿನ ಕಾರಂಜಿಯಿಂದ ನೀರು ಕುಡಿದು ಬೇಲಿಯಿಂದ ಹೊರನಡೆಯುತ್ತಿರುವ ಮತ್ತೊಂದು ವಿಡಿಯೋವನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.
https://twitter.com/buitengebieden/status/1542394848971472902?ref_src=twsrc%5Etfw%7Ctwcamp%5Etweetembed%7Ctwterm%5E1542428321816145920%7Ctwgr%5E%7Ctwcon%5Es2_&ref_url=https%3A%2F%2Fwww.india.com%2Fviral%2Fviral-video-gentle-elephant-throws-dirt-on-man-sri-lanka-hotel-natta-kota-jetwing-hathi-5486410%2F