
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾದೊಂದಿಗೆ ಕೇಳಿ ಬಂದಿದ್ದ ಹೆಸರು ನಟಿ ಗೆಹಾನಾ ವಸಿಸ್ಟ್. ಈಗ ಅವರು ತಮ್ಮ ಗೆಳೆಯ ಫೈಜಾನ್ ಶೇಖ್ ಅವರನ್ನು ಮದುವೆಯಾಗುತ್ತಿದ್ದಂತೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಫೈಝಲ್ ಶೇಖ್ ಅವರೊಂದಿಗೆ ನಟಿಯ ವಿವಾಹದ ಚಿತ್ರಗಳು ವೈರಲ್ ಆಗುತ್ತಿದ್ದು ನೆಟ್ಟಿಗರು ಇದನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ.
ಮುಸ್ಲಿಂ ಸಂಪ್ರದಾಯದಂತೆ ಇಬ್ಬರ ಮದುವೆಯಾಗಿದೆ.
ಫೈಜನ್ ಅನ್ಸಾರಿ ಮತ್ತು ಗೆಹನಾ ವಸಿಷ್ಠ್ ಹಲವು ಕಾಲದಿಂದ ಪ್ರೀತಿಸುತ್ತಿದ್ದರು. ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಆಗಿ ಫೈಜನ್ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಗೆಹನಾ ವಸಿಷ್ಠ್ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಚತ್ತೀಸ್ಗಡದವರು. ಮಾಡೆಲ್ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ.