alex Certify BIG NEWS: ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ: UPS ಜಾರಿ ಬಗ್ಗೆ ಗೆಜೆಟ್ ಅಧಿಸೂಚನೆ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ: UPS ಜಾರಿ ಬಗ್ಗೆ ಗೆಜೆಟ್ ಅಧಿಸೂಚನೆ ಪ್ರಕಟ

 ನವದೆಹಲಿ: ಏಕೀಕೃತ ಪಿಂಚಣಿ ಯೋಜನೆ ಅನುಷ್ಠಾನದ ಕುರಿತು ಭಾರತ ಸರ್ಕಾರದ 25ನೇ ಜನವರಿ 2025 ರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ.

ಪಿಂಚಣಿಗಾಗಿ Bench Mark Corpus ಅಂತ ಒಂದನ್ನು ಶುರು ಮಾಡಿದ್ದಾರೆ. ಅದರ ಮೇಲೆ ಪೆನ್ಷನ್ ಡಿಸೈಡ್ ಆಗ್ತದೆ. ಅದನ್ನು ನಿರ್ಧರಿಸುವವರು PFRDA.

⁠ಸ್ವಯಂ ನಿವೃತ್ತಿ UPS ನಲ್ಲೂ ಅನ್ವಯ. 25 ವರ್ಷ qualified service ಆಗಿರಲೇಬೇಕು. ಆದರೆ ಪೆನ್ಷನ್ ಶುರು ಆಗುವುದು ಮಾತ್ರ ಅವರಿಗೆ 60 ವರ್ಷ ಆದ ಬಳಿಕ.

⁠ಕನಿಷ್ಠ 10 ವರ್ಷ ಸೇವೆ ಪೂರ್ಣವಾಗಿ ನಿವೃತ್ತರಾದರೆ ಮಾತ್ರ UPS ಅನ್ವಯ.

⁠ಈಗಿರುವಂತೆ ನಮ್ಮ ವೇತನದಿಂದ 10% NPS ಬದಲಿಗೆ UPS ಗೆ ಕಡಿತವಾಗಲಿದೆ.

⁠ಈಗಾಗಲೇ ಇರುವ nps ಫಂಡನ್ನು UPS ಗೆ ವರ್ಗಾಯಿಸಲಾಗುತ್ತದೆ.

⁠ಒಮ್ಮೆ UPS ಆಯ್ಕೆ ಮಾಡಿದರೆ ಮತ್ತೆ NPS ಗೆ ಹಿಂದಿರುಗಲು ಆಯ್ಕೆ ಇಲ್ಲ

⁠ಸದ್ಯಕ್ಕೆ NPS OR UPS ಆಯ್ಕೆಗೆ ಯಾವುದೇ ದಿನಾಂಕ ಅಂತಿಮಗೊಳಿಸಿಲ್ಲ

⁠ಗ್ರಾಚ್ಯುಟಿ ರೀತಿಯಲ್ಲೇ ಇನ್ನೊಂದು ಬಗೆಯ ದೊಡ್ಡ ಮೊತ್ತ ವು ನಿವೃತ್ತಿಯ ಸಮಯದಲ್ಲಿ ಸಿಗಲಿದೆ. ಇದು ಗ್ರ್ಯಾಚ್ಯುಟಿಗೆ ಬದಲಾಗಿ ಸಿಗಲಿದೆಯೇ ಅಥವಾ ಗ್ರಾಚ್ಯುಟಿಯ ಜೊತೆಗೆ ಹೆಚ್ಚುವರಿಯಾಗಿ ಸಿಗಲಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ!

⁠ಈಗಾಗಲೇ NPS ಪದ್ಧತಿಯಲ್ಲಿ ನಿವೃತ್ತರಾಗಿರುವ, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುವವರಿಗೂ ಇದು ಅನ್ವಯ. ಕನಿಷ್ಠ ಪಿಂಚಣಿ 10000 + DA.

⁠ಈ ಹೊಸ ಪದ್ಧತಿ ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...