ಬೆಂಗಳೂರು: ಗವಿಗಂಗಾಧರನಿಗೆ ಸೂರ್ಯದೇವ ಪೂಜೆ ಸಲ್ಲಿಸಿದ್ದಾನೆ. ಆದರೆ ಮೋಡ ಕವಿದಿದ್ದ ಕಾರಣ ಬರಿಗಣ್ಣಿಗೆ ಗೋಚರತೆ ಕಂಡುಬಂದಿಲ್ಲ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ.
ಮಕರ ಸಂಕ್ರಮಣದ ದಿನ ಬೆಂಗಳೂರಿನ ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಜೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ಸೂರ್ಯದೇವ ಗಂಗಾಧರೇಶ್ವರನಿಗೆ ನಮಿಸಿ ತನ್ನ ಪಥವನ್ನು ಬದಲಿಸುತ್ತಾನೆ ಎಂಬುದು ನಂಬಿಕೆ. ಸಯಂಕಾಲ 5:14ರಿಂದ 5:17ರ ಸಮಯದಲ್ಲಿ ಈ ವಿಸ್ಮಯ ನಡೆಯಬೇಕಾಗಿತ್ತು. ಆದರೆ ಈ ಬಾರಿ ಸೂರ್ಯ ಕಿರಣಗಳು ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ್ದು ಗೋಚರವಾಗಿಲ್ಲ. ಇದು ಸಹಜವಾಗಿಯೇ ಭಕ್ತರಿಗೆ ನಿರಾಸೆಯನ್ನುಂಟುಮಾಡಿತ್ತು. ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರು ಆಯುವೇ ಆತಂಕಬೇಡ. ಸೂರ್ಯ ಕಿರ್ಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್, ಸೂರ್ಯದೇವ ಗವಿಗಂಗಾಧರನಿಗೆ ಪೂಜಿಸಿ ನಮಸ್ಕರಿಸಿದ್ದಾನೆ ಎಂಬುದು ನಮಗೆ ಗೊತ್ತು. ಆದರೆ ಅದು ಬರಿಗಣ್ಣಿಗೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ದಟ್ಟವಾಗಿ ಮೋಡಕವಿದ ವಾತಾವರಣವಿರುವುದರಿಂದ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿದ್ದು ಗೋಚರವಾಗಿಲ್ಲ ಅಷ್ಟೇ. ಆದರೆ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಎಷ್ಟು ಸಮಯ ಸ್ಪರ್ಶಿಸಿವೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಸೂರ್ಯದೇವ ಶಿವಪರಮಾತ್ಮನಿಗೆ ಪೂಜೆ ಸಲ್ಲಿಸಿದ್ದಾನೆ. ಪ್ರಸ್ತಕ್ತ ವರ್ಷ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.