
ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗರಂ ಆಗಿದ್ದರು. ಇದೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಗೌತಮ್ ಗಂಭೀರ್, ನಾನು ಕೊಹ್ಲಿ ಪರ ಘೋಷಣೆ ಕೂಗಿದ್ದಕ್ಕೆ ಆ ವರ್ತನೆ ತೋರಿಲ್ಲ. ಕೆಲವರು ಭಾರತ ವಿರೋಧಿ ಘೋಷಣೆ ಜೊತೆಗೆ ಕಾಶ್ಮೀರದ ಕುರಿತೂ ಘೋಷಣೆಗಳನ್ನು ಕೂಗಿದ್ದರು, ಇದಕ್ಕಾಗಿ ಆ ರೀತಿ ಮಾಡಿದ್ದೆ ಎಂದಿದ್ದಾರೆ.
ಆದರೆ ಅವರ ಈ ಹೇಳಿಕೆ ಕೂಡಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದ್ದು, ಕೊಹ್ಲಿ ಪರ ಘೋಷಣೆ ಕೂಗಿದ ಸಂದರ್ಭದಲ್ಲಿಯೇ ಗೌತಮ್ ಗಂಭೀರ್ ಮಧ್ಯದ ಬೆರಳು ತೋರಿಸಿದ್ದಾರೆ. ಇದೀಗ ಆಕ್ರೋಶ ವ್ಯಕ್ತವಾದ ಬಳಿಕ ಸುಳ್ಳು ಸಮರ್ಥನೆಗಳನ್ನು ನೀಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದಾರೆ. ಜೊತೆಗೆ ರಾಜಕಾರಣಿಗಳು ತಮಗೆ ಅನುಕೂಲ ಬಂದ ರೀತಿಯಲ್ಲಿ ಹೇಳಿಕೆಗಳನ್ನು ಬದಲಾಯಿಸುತ್ತಾರೆ ಎಂದು ಗೇಲಿ ಮಾಡಿದ್ದಾರೆ.