ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ ಹೊರಹೊಮ್ಮಿದ್ದಾರೆ. ಭಾರತದಲ್ಲಿ 100 ಕೋಟಿ ಡಾಲರ್ ಗೂ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವ ಕುಬೇರರ ಸಂಖ್ಯೆ 334ಕ್ಕೆ ತಲುಪಿದೆ ಎಂದು ಹುರುನ್ ಇಂಡಿಯಾ ವರದಿ ತಿಳಿಸಿದೆ.
ಸಿರಿವಂತರ ರ್ಯಾಂಕಿಂಗ್ ಪಟ್ಟಿಯಲ್ಲಿ 11,61,600 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿರುವ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಶೇಕಡ 95 ರಷ್ಟು ಹೆಚ್ಚಾಗಿದೆ. 2020ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.
ಮುಕೇಶ್ ಅಂಬಾನಿ ಸದ್ಯ 10.14 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಶಿವನಾಡರ್ ಹೆಚ್.ಸಿ.ಎಲ್. 3.14 ಲಕ್ಷ ಕೋಟಿ ರೂ. ಮೌಲ್ಯದ ಸಂಪತತ್ಉ ಹೊಂದಿದ್ದು, ಸೈರಸ್ ಪೂನಾವಾಲಾ 2.89 ಲಕ್ಷ ಕೋಟಿ ರೂ., ದಿಲೀಪ್ ಸಾಂಘ್ವಿ 2.49 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ.
ಭಾರತದಲ್ಲಿ ಶತಕೋಟ್ಯಾಧೀಶರ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. 2024ರಲ್ಲಿ ಭಾರತದಲ್ಲಿ ಐದು ದಿನಕೊಬ್ಬರು 100 ಕೋಟಿ ಡಾಲರ್ ಸಂಪತ್ತಿನ ಮೌಲ್ಯದ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ವರ್ಷ ದೇಶದ ಅತಿ ಹೆಚ್ಚು ಸಂಪತ್ತು ಉಳ್ಳವರ ಸಂಖ್ಯೆ 220 ರಿಂದ 1539ಕ್ಕೆ ತಲುಪಿದೆ. ಇವರಲ್ಲಿ 272 ಮಂದಿ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಹೊಂದಿದ್ದಾರೆ. ದೇಶದಲ್ಲಿ ಒಂದು ಲಕ್ಷ ಕೋಟಿ ರೂ ಮೌಲ್ಯವನ್ನು ಹೊಂದಿರುವ 8 ಶ್ರೀಮಂತರನ್ನು ಹೊಂದಿದೆ. ಭಾರತದಲ್ಲಿ ಅತಿ ಹೆಚ್ಚು ಬಿಲಿಯನೇರ್ ಗಳು ಇರುವ ನಗರಗಳಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ.