ಪ್ರಚಾರ ಕಾರ್ಯ ಶುರು ಮಾಡಿದ ‘ಗೌರಿ’ ಚಿತ್ರತಂಡ 01-08-2024 4:24PM IST / No Comments / Posted In: Featured News, Live News, Entertainment ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯಿಸಿರುವ ಗೌರಿ ಚಿತ್ರ ತನ್ನ ಹಾಡುಗಳಿಂದಲೇ ಭರ್ಜರಿ ಸೌಂಡ್ ಮಾಡಿದ್ದು, ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಈ ಸಿನಿಮಾ ಇದೇ ಆಗಸ್ಟ್ 15 ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಪ್ರಚಾರ ಕಾರ್ಯವನ್ನು ಶುರು ಮಾಡಲಾಗಿದೆ. ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಗೌರಿ ಚಿತ್ರ ತಂಡದ ಬಹುತೇಕ ಕಲಾವಿದರು ಆಗಮಿಸಿದ್ದು, ಹಲವಾರು ಗಾಯಕರು ಈ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ಸಮರ್ಜಿತ್ ಅವರಿಗೆ ಜೋಡಿಯಾಗಿ ‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದು, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಲೂಸ್ ಮಾದ ಯೋಗಿ ಉಳಿದ ತಾರಾಂಗಣದಲ್ಲಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬರ್ಗಿ, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದು, ಬಿ.ಎ ಮಧು, ರಾಜಶೇಖರ್ ಕೆ.ಎಲ್, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಹಾಗೂ ಡಾಕ್ಟರ್ ರವಿವರ್ಮ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.