alex Certify BIG NEWS: ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಐಜ್ವಾಲ್: ನೆರೆಯ ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಮೇಲೆ ತನಿಖೆ ನಡೆಸುವಂತೆ ಗುವಾಹಟಿ ಹೈಕೋರ್ಟ್‌ನ ಐಜ್ವಾಲ್ ಪೀಠವು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ನಿರ್ದೇಶನ ನೀಡಿದೆ.

ರುವಾಟ್‌ಫೆಲಾನು ಎಂದು ಜನಪ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತ ವನ್ರಾಮ್‌ ಚುವಾಂಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶವನ್ನು ಇತ್ತೀಚೆಗೆ ನೀಡಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಮಂಗಳವಾರ ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಜೋಥಾನ್‌ ಖುಮಾ ಮತ್ತು ನ್ಯಾಯಮೂರ್ತಿ ಮರ್ಲಿ ವ್ಯಾಂಕುಂಗ್ ಅವರನ್ನೊಳಗೊಂಡ ಪೀಠವು, ಈ ಅಪರಾಧವು ವಾಣಿಜ್ಯ ವಹಿವಾಟುಗಳಿಗೆ ಸಂಬಂಧಿಸಿದೆ. ಸಿಬಿಐ ಕೈಗೊಂಡ ತನಿಖೆಯ ಮೂಲಕ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಸಾಧಿಸಬಹುದು ಎಂದು ಹೇಳಿದೆ,

ಮ್ಯಾನ್ಮಾರ್‌ನಿಂದ ಅಂತಾರಾಷ್ಟ್ರೀಯ ಕಳ್ಳಸಾಗಣೆಯನ್ನು ಒಳಗೊಂಡಿರುವುದರಿಂದ ಅಪರಾಧವನ್ನು ಕೂಲಂಕಷವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಪೊಲೀಸರು ತೆಗೆದುಕೊಂಡ ನಿಲುವಿನಿಂದಾಗಿ ಸಿಬಿಐಗೆ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಿಬಿಐ ಈ ವಿಷಯವನ್ನು ತನಿಖೆ ಮಾಡುತ್ತದೆ ಮತ್ತು ಅಗತ್ಯವಿದ್ದರೆ ಪ್ರಕರಣವನ್ನು ದಾಖಲಿಸುತ್ತದೆ ಮತ್ತು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ ಎನ್ನಲಾಗಿದೆ. ಒಣ ಅಡಿಕೆ ಕಳ್ಳಸಾಗಣೆಯನ್ನು ತಡೆಯಲು ಮಿಜೋರಾಂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರುವಾತ್ಫೆಲಾ ನು ಅವರು ಹೈಕೋರ್ಟ್‌ನ ಐಜ್ವಾಲ್ ಪೀಠದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ದಕ್ಷಿಣ ಮಿಜೋರಾಂನ ಚಂಫೈ ಜಿಲ್ಲೆಯ ಮೂಲಕ ಮ್ಯಾನ್ಮಾರ್‌ನಿಂದ ಭಾರತಕ್ಕೆ ಒಣ ಅಡಿಕೆ ಕಳ್ಳಸಾಗಣೆ ಹಾವಳಿಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರವು “ನಿಷ್ಕ್ರಿಯ ಪಾತ್ರ” ವಹಿಸುತ್ತಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರು ಒತ್ತಾಯಿಸಿದರು.

ಕಳೆದ ಕೆಲವು ವರ್ಷಗಳಿಂದ ಮಿಜೋರಾಂಗೆ ಬರ್ಮಾದ ಅಡಿಕೆ ಕಳ್ಳಸಾಗಣೆ ರಾಜಕೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ರಾಜಕಾರಣಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕಳ್ಳಸಾಗಾಣಿಕೆದಾರರ ನಡುವಿನ ಸಂಬಂಧದ ಬಗ್ಗೆ ಆರೋಪಗಳಿವೆ.

ಅಡಿಕೆ ಅಕ್ರಮ ಸಾಗಣೆ ಹಾವಳಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸ್ಥಳೀಯ ಅಡಿಕೆ ಬೆಳೆಗಾರರು ಅಕ್ರಮ ಸಾಗಣೆ ತಡೆಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ ಗಳನ್ನು ಸ್ಥಾಪಿಸುವ ಮೂಲಕ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...