alex Certify Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಣ್ಣೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಣ್ಣೀರು

ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಐಷಾರಾಮಿ ಕಾರು ಮಾಲೀಕರೊಬ್ಬರು ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದು, ನಂತರ ಮಹಿಳಾ ಸಿಬ್ಬಂದಿಯತ್ತ ಪೆಟ್ರೋಲ್​ನ ದುಡ್ಡು ಎಸೆದು ದರ್ಪ ಮರೆದಿದ್ದಾನೆ.

ಕೆಳಕ್ಕೆ ಬಿದ್ದ ದುಡ್ಡನ್ನು ಹೆಕ್ಕಿಕೊಂಡ ಮಹಿಳಾ ಸಿಬ್ಬಂದಿಗೆ ದುಃಖ ತಡೆದುಕೊಳ್ಳಲು ಆಗದೇ ಇನ್ನೊಂದು ಬದಿಗೆ ಬಂದು ಕಣ್ಣೀರು ಒರೆಸಿಕೊಂಡಿದ್ದಾಳೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕನ ವರ್ತನೆ ಇಂಟರ್‌ನೆಟ್‌ನಲ್ಲಿ ಆಕ್ರೋಶ ಮೂಡಿಸಿದೆ. ಈ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಪೂರ್ಣವಾಗಿ ಅಸಹ್ಯಗೊಂಡಿದ್ದಾರೆ.

50 ಸೆಕೆಂಡ್‌ಗಳ ವಿಡಿಯೋದಲ್ಲಿ ಕೆಲಸಗಾರ್ತಿಯೊಬ್ಬಳು ಪುರುಷನ ಐಷಾರಾಮಿ ಕಾರಿಗೆ ಪೆಟ್ರೋಲ್​ ಗ್ಯಾಸ್ ತುಂಬಿಸುತ್ತಿರುವುದನ್ನು ಕಾಣಬಹುದು. ಅದಾದ ಮೇಲೆ ದುಡ್ಡನ್ನು ಕೇಳಿದಾಗ ಆತ ಅದನ್ನು ಎಸೆದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಗೆ ದುಃಖವಾಗಿರುವುದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಕಾಣಿಸುತ್ತಿದೆ.

https://youtu.be/4jsEzGZm-6I

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...