ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ಪಟ್ಟಣದಲ್ಲಿರುವ ವಾಟರ್ ಫಿಲ್ಟರ್ ಹೌಸ್ ನಲ್ಲಿ ಅನಿಲ ಸೋರಿಕೆಯಾಗಿದ್ದು, ಮೂವರು ಅಗ್ನಿಶಾಮಕದಳದ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರಾದ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅನಿಲ ಸೋರಿಕೆಯಿಂದಾಗಿ ಪಟ್ಟಣದ ವಾಟರ್ ಫಿಲ್ಟರ್ ಪಂಪ್ ಹೌಸ್ ಮುಂದಿನ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದ್ದು, ಅನಿಲ ಸೋರಿಕೆ ನಿಲ್ಲಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.
ಸೋರಿಕೆ ನಿಲ್ಲಿಸುವ ವೇಳೆ ವಿಷಾನಿಲ ಸೇವಿಸಿದ ಮೂವರು ಅಗ್ನಿಶಾಮಕದಳದ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.