alex Certify ಮೃತ ದೇಹದ ಬಳಿ ಕುಟುಂಬಸ್ಥರು ಯಾಕಿರಬೇಕು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ದೇಹದ ಬಳಿ ಕುಟುಂಬಸ್ಥರು ಯಾಕಿರಬೇಕು ಗೊತ್ತಾ…..?

ಸನಾತನ ಧರ್ಮದಲ್ಲಿ, ಸತ್ತವರ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ. ಸತ್ತ 13ನೇ ದಿನ ಮಾಡುವ ವಿಧಿ-ವಿಧಾನ ಮಾತ್ರವಲ್ಲ, ಮೃತ ದೇಹವನ್ನು ಇಡುವ ಬಗ್ಗೆಯೂ ಕೆಲವೊಂದು ನಿಯಮಗಳಿವೆ. ಸಾಮಾನ್ಯವಾಗಿ ಸತ್ತ ವ್ಯಕ್ತಿಯ ಸಂಬಂಧಿಕರು ಬರುವವರೆಗೆ ಅಂತಿಮ ಸಂಸ್ಕಾರ ನಡೆಸುವುದಿಲ್ಲ. ದೂರದೂರುಗಳಿಂದ ಸಂಬಂಧಿಕರು ಬರುವವರಿದ್ದರೆ ಶವ ಸಂಸ್ಕಾರಕ್ಕೆ ಸಮಯ ಹಿಡಿಯುತ್ತದೆ.

ಹಾಗೆ ಸನಾತನ ಧರ್ಮದಲ್ಲಿ ರಾತ್ರಿ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ. ರಾತ್ರಿ ಶವ ಕಾಯುತ್ತಾರೆ. ಶವದ ಪಕ್ಕ ಸಂಬಂಧಿಕರು, ಸ್ನೇಹಿತರು ಇರ್ತಾರೆ. ಶವವನ್ನು ಒಂಟಿಯಾಗಿ ಬಿಡಬಾರದು ಎಂಬ ನಂಬಿಕೆಯಿದೆ. ರಾತ್ರಿ ಸಾಮಾನ್ಯವಾಗಿ ಪ್ರೇತಾತ್ಮಗಳು ಓಡಾಡುತ್ತಿರುತ್ತವೆ. ಶವದ ಬಳಿ ಯಾರೂ ಇಲ್ಲದೆ ಹೋದ್ರೆ ಶವವನ್ನು ಪ್ರೇತಾತ್ಮ ಪ್ರವೇಶ ಮಾಡಿ ತೊಂದರೆ ಮಾಡುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ, ಶವದ ಅಕ್ಕಪಕ್ಕದಲ್ಲಿ ಸತ್ತವರ ಆತ್ಮ ಓಡಾಡುತ್ತಿರುತ್ತದೆ. ಶವದ ಪಕ್ಕ ಆಪ್ತರು ಇಲ್ಲದೆ ಹೋದ್ರೆ ಅದಕ್ಕೆ ನೋವಾಗುತ್ತದೆ ಎಂಬ ನಂಬಿಕ ಕೂಡ ಇದೆ.

ವ್ಯಕ್ತಿ ಸಾವನ್ನಪ್ಪಿದ ಸ್ವಲ್ಪ ಸಮಯದ ನಂತ್ರ ಮೃತ ದೇಹ  ಕೊಳೆಯಲು ಪ್ರಾರಂಭಿಸುತ್ತದೆ. ಇದರಿಂದಾಗಿ ಆತನ ದೇಹದಲ್ಲಿ ಹಲವು ಬಗೆಯ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಶವದಿಂದ ವಾಸನೆ ಬರಲಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೀಟಗಳು ಅಥವಾ ಇರುವೆಗಳು ಮೃತದೇಹದ ಬಳಿ ಬಂದು ಹಾನಿ ಮಾಡುವ ಸಾಧ್ಯತೆಯಿರುತ್ತದೆ. ಈ ಪರಿಸ್ಥಿತಿ ಬರದಂತೆ ಕುಟುಂಬಸ್ಥರು ಮೃತದೇಹದ ಬಳಿಯೇ ಇದ್ದು ಆರೈಕೆ ಮಾಡಬೇಕು.

ಅಲ್ಲದೆ, ಮೃತದೇಹದ ಸುತ್ತಲೂ ಸುಗಂಧ ದ್ರವ್ಯಗಳನ್ನು ಹಚ್ಚಬೇಕು.  ಕೆಲವು ಸ್ಥಳಗಳಲ್ಲಿ, ಮೃತದೇಹದ ಬಳಿ ಸುಣ್ಣ ಅಥವಾ ಇತರ ವಸ್ತುಗಳೊಂದಿಗೆ ಒಂದು ರೇಖೆಯನ್ನು ಎಳೆಯಲಾಗುತ್ತದೆ. ಇದರಿಂದಾಗಿ ಮೃತ ದೇಹವು ಕೀಟಗಳಿಂದ ಸುರಕ್ಷಿತವಾಗಿ ಉಳಿಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...