ಭೂಮಿ ಮೇಲೆ ಜನಿಸಿದ ಮೇಲೆ ಸಾವು ನಿಶ್ಚಿತ. ಸಾವು ಯಾವಾಗ ಬರುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಅರೆ ಕ್ಷಣದಲ್ಲಿ ಪ್ರಾಣ ಬಿಟ್ಟರೆ ಮತ್ತೆ ಕೆಲವರು ನೋವಿನಲ್ಲಿ ನರಳಿ ಸಾಯುತ್ತಾರೆ. ಯಾವಾಗ ಸಾವು ಬರುತ್ತೆ ಎಂದು ಕಾಯುವಷ್ಟು ಹಿಂಸೆ ಅನುಭವಿಸುತ್ತಾರೆ. ಸಾವಿನ ಸಂದರ್ಭದಲ್ಲಿ ಅತಿ ಹೆಚ್ಚು ಕಷ್ಟವನ್ನು ಯಾರು ಅನುಭವಿಸುತ್ತಾರೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿ – ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಬಿಡಿ…..!
ಸಾವಿಗಿಂತ ಮೊದಲು ಮಾತು ನಿಂತಿರುತ್ತದೆ. ಪರಿಚಿತರು, ಕಣ್ಣು ಮುಂದೆ ಬರುವ ಯಾರೂ ಕಾಣಿಸುವುದಿಲ್ಲ. ಸೂರ್ಯನ ಕಿರಣ ಕೂಡ ಸರಿಯಾಗಿ ಕಾಣುವುದಿಲ್ಲ. ಆಹಾರ ಸೇವನೆ ಇರಲಿ, ನೀರು ಕುಡಿಯಲೂ ಸಾಧ್ಯವಾಗುವುದಿಲ್ಲ. ಇಡೀ ಶರೀರವೇ ನೋವಿನಿಂದ ಕೂಡಿರುತ್ತದೆ. ಜೀವನದಲ್ಲಿ ನಡೆದ ಎಲ್ಲ ಘಟನೆಗಳು ಕಣ್ಮುಂದೆ ಬರಲು ಶುರುವಾಗುತ್ತವೆ. ಇದಕ್ಕೆ ಕಾರಣ, ಮನುಷ್ಯ ಮಾಡಿದ ಕರ್ಮಫಲ.
ಯಾವ ವ್ಯಕ್ತಿ ಮಹಿಳೆಯರನ್ನು ಅವಮಾಸುತ್ತಾನೋ, ಇತರರ ಹಣವನ್ನು ತೆಗೆದುಕೊಳ್ಳುತ್ತಾನೋ, ಮೋಸ ಮಾಡಿ, ಸುಳ್ಳು ಹೇಳಿ ವಂಚಿಸುತ್ತಾನೋ, ಬಡ ಮತ್ತು ಅಸಹಾಯಕರಿಗೆ ಕಿರುಕುಳ ನೀಡುತ್ತಾನೋ ಅಂಥವರು ಸಾವಿನ ಸಂದರ್ಭದಲ್ಲಿ ಕಷ್ಟ ಅನುಭವಿಸುತ್ತಾರೆ. ಸಾವಿನ ನಂತರವೂ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಸಾಕಷ್ಟು ಕಷ್ಟಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.