alex Certify ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯಿಂದ ಮತ್ತೊಂದು ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯಿಂದ ಮತ್ತೊಂದು ಮಹತ್ವದ ಕ್ರಮ

ಲಾಲು ಪ್ರಸಾದ್ ರೈಲ್ವೇ ಸಚಿವರಾಗಿದ್ದ ವೇಳೆ ಪರಿಚಯಿಸಲಾಗಿದ್ದ ಗರೀಬ್ ರಥದ ಬೋಗಿಗಳ ಬದಲಿಗೆ ಇದೀಗ ಹೊಸ ಎಸ್‌-3 ಸ್ಥರದ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ.

ಈ ಹಿಂದೆ ಇದ್ದ ಎಸಿ-3 ಸ್ಥರಗಳ ಬೋಗಿಗಳ ಬದಲಿಗೆ ಹೊಸದಾಗಿ ಬಂದಿರುವ ಇದೇ ರೀತಿಯ ಬೋಗಿಗಳಲ್ಲಿ ಪ್ರಯಾಣಿಸಲು ಟಿಕೆಟ್‌ ವೆಚ್ಚವು, ಸಾಮಾನ್ಯ ರೈಲುಗಳ ಎಸಿ-3 ಟಯರ್‌ ಕೋಚ್‌ ಪ್ರಯಾಣಕ್ಕಿಂತ 8%ನಷ್ಟು ಕಡಿಮೆ ಇರಲಿದೆ.

ಸದ್ಯಕ್ಕೆ ಕಪುರ್ತಲಾದ ಕೋಚ್ ಕಾರ್ಖಾನೆಯಲ್ಲಿ ಎಸಿ-3 ಎಕಾನಮಿ ದರ್ಜೆಯ 50 ಬೋಗಿಗಳನ್ನು ಉತ್ಪಾದಿಸಲಾಗಿದ್ದು, ದೇಶದ ವಿವಿಧ ರೈಲ್ವೇ ವಲಯಗಳಿಗೆ ರವಾನೆ ಮಾಡಲಾಗಿದೆ. ಈ ಬೋಗಿಗಳನ್ನು ಬೇರೆ ಬೇರೆ ರೈಲುಗಳಿಗೆ ಫಿಟ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇಂಥ 800 ಬೋಗಿಗಳನ್ನು ಉತ್ಪಾದಿಸಲು ರೈಲ್ವೇ ಇಲಾಖೆ ಚಿಂತನೆ ನಡೆಸಿದೆ.

ಅನೌಪಚಾರಿಕ ಕ್ಷೇತ್ರದ ನೌಕರರಿಗೆ ಕೇಂದ್ರದಿಂದ ಭರ್ಜರಿ ಗುಡ್‌ ನ್ಯೂಸ್: ಸಾಮಾಜಿಕ ಭದ್ರತೆ ಯೋಜನೆ ತಲುಪಿಸಲು ಇ- ಶ್ರಮ್‌ ಪೋರ್ಟಲ್

ಪ್ರತಿಯೊಂದು ಬರ್ತ್‌ಗೂ ಎಸಿ ಕಿಂಡಿಗಳನ್ನು ಕೊಡಮಾಡಲಾಗಿರುವ ಈ ಹೊಸ ಬೋಗಿಗಳಲ್ಲಿ, ಸೀಟುಗಳು ಮಾಡ್ಯುಲರ್‌ ವಿನ್ಯಾಸ ಸುಧಾರಿಸಿದ್ದು, ತಿಂಡಿ-ತೀರ್ಥಗಳನ್ನು ಇಟ್ಟುಕೊಂಡು ತಿನ್ನಲು ಮಡಚಬಲ್ಲ ಟೇಬಲ್‌ಗಳನ್ನು ಕೊಡಲಾಗಿದೆ.

ಗಾಯವಾಗದಂತೆ ವಿನ್ಯಾಸಗೊಳಿಸಲಾದ ಸ್ಪೇಸಿಂಗ್, ನೀರಿನ ಬಾಟಲಿ ಇಡಲು ಹೋಲ್ಡರ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ನಿಯತಕಾಲಿಕೆಗಳನ್ನು ಇಟ್ಟುಕೊಳ್ಳಲು ವ್ಯವಸ್ಥೆಗಳನ್ನು ಈ ಹೊಸ ಎಸಿ-3 ಟಯರ್‌ ಬೋಗಿಗಳು ಹೊಂದಿವೆ.

ಜೊತೆಗೆ ವೈಯಕ್ತಿಕ ರೀಡಿಂಗ್ ದೀಪಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಪ್ರತಿಯೊಂದು ಆಸನಕ್ಕೂ ನೀಡಲಾಗಿದೆ. ಇನ್ನಷ್ಟು ಅಗಲವಾದ ದ್ವಾರಗಳನ್ನು ಹೊಂದಿರುವ ಈ ಬೋಗಿಗಳಲ್ಲಿ ಅಶಕ್ತ ಪ್ರಯಾಣಿಕರು ಓಡಾಡಲು ಅನುಕೂಲವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...