ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು ನಿಮಿಷ ಮಾಡಬೇಕು. ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮುಕ್ಕಳಿಸಿ ಉಗಿಯಬೇಕು. ಬಳಿಕ ಬ್ರಷ್ ಮಾಡಿಕೊಳ್ಳಬಹುದು.
ಇದರಿಂದ ಹಲ್ಲು ನೋವು, ವಸಡಿನ ನೋವು, ವಸಡಿನಿಂದ ರಕ್ತ ಬರುವುದು ಕಡಿಮೆ ಆಗುತ್ತದೆ. ಹುಳುಕು ಹಲ್ಲು ಸಮಸ್ಯೆ ದೂರವಾಗುತ್ತದೆ. ಹಲ್ಲಿನ ಮೇಲೆ ಕರಿ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ. ಎಲ್ಲ ರೀತಿಯ ಹಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದನ್ನು ಕನಿಷ್ಟ ೩೦ ದಿನ ಮಾಡಿ ನೋಡಿ. ಬಾಯಿಯ ದುರ್ವಾಸನೆಯನ್ನು ಕೂಡ ದೂರ ಮಾಡುತ್ತದೆ.
ಬಾಯಿ ಮುಕ್ಕಳಿಸುವದರಿಂದ ವಸಡಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಚರ್ಮ ಆರೋಗ್ಯವಾಗಿ ಇರುತ್ತದೆ. ತಲೆನೋವನ್ನು ಕಡಿಮೆ ಮಾಡುತ್ತದೆ ಚಿಕ್ಕ ವಯಸ್ಸಿನಲ್ಲಿ ಬರುವ ಬಿಳಿ ಕೂದಲನ್ನು ಕೂಡ ದೂರ ಮಾಡುತ್ತದೆ. ಮಲಬದ್ದತೆಯನ್ನು ನಿವಾರಿಸುತ್ತದೆ.