ಈ ವರ್ಷದ ಗಣೇಶ ಹಬ್ಬ ಮುಕ್ತಾಯದ ಹಂತಕ್ಕೆ ಬಂದಿದೆ. ಬೇರೆ ಬೇರೆ ಊರುಗಳಲ್ಲಿ ಗಣಪತಿಯನ್ನು ವೈಭವೋಪೇತವಾಗಿ ಬೀಳ್ಕೊಟ್ಟಿದ್ದಾರೆ.
ಗಣಪತಿ ದೇವರಿಗೆ ಮೀಸಲಾದ ಹತ್ತು ದಿನಗಳ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಾಮಾನ್ಯವಾಗಿ ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಯೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.
ಈ ದಿನದಂದು ಭಕ್ತರು ಗಣಪತಿಯನ್ನು ಬೀಳ್ಕೊಡುವ ಮೂಲಕ ಉತ್ಸವಕ್ಕೆ ಅಂತ್ಯ ಹಾಡುತ್ತಾರೆ.
ಇದೀಗ ಗಣಪತಿಗೆ ಭಾವಪೂರ್ಣ ವಿದಾಯ ಹೇಳುವ ಭಕ್ತರ ಫೋಟೋಗಳು ಮತ್ತು ವಿಡಿಯೋಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅನೇಕ ಹೃದಯಸ್ಪರ್ಶಿ ದೃಶ್ಯಗಳು ಕಂಡುಬಂದವು.
ಮುಂಬೈನಲ್ಲಿ ಕೋಮು ಸೌಹಾರ್ದತೆಗೆ ಉದಾಹರಣೆ ಎಂಬಂತೆ ಭಕ್ತರು ಮಸೀದಿಯ ಮುಂದೆ ಹಾದು ಹೋಗುವಾಗ ಗಣಪತಿ ವಿಸರ್ಜನಾ ಯಾತ್ರೆಯನ್ನು ನಿಲ್ಲಿಸಿದರು ಮತ್ತು ತಮ್ಮ ಭಜನೆಯನ್ನು ‘ಭರ್ ದೋ ಚೋಲಿ ಮೇರಿ ಯಾ ಮುಹಮ್ಮದ್’ ಎಂದು ಬದಲಿಸಿದ್ದರು.
ಪುಟ್ಟ ಬಾಲಕಿಯೊಬ್ಬಳು ಗಣಪತಿಯನ್ನು ವಿಸರ್ಜನೆ ಕಳಿಸಲು ಬಿಡದೇ ಕಣ್ಣೀರು ಹಾಕುತ್ತಾ ಗಣಪತಿ ಮೂರ್ತಿಯನ್ನು ತಬ್ಬಿಕೊಳ್ಳುವ ವಿಡಿಯೋ ವೈರಲ್ ಆಗಿದ್ದು, ಮಗುವಿನ ತಾಯಿ ಎಷ್ಟೇ ಮನವರಿಕೆ ಮಾಡಿದರೂ ಸಾಧ್ಯವಾಗುವುದೇ ಇಲ್ಲ. ಕೊನೆಗೆ ಮಗು ತಾನು ಗಣಪತಿಗೆ ಅಡ್ಡಲಾಗಿ ಕುಳಿತುಕೊಳ್ಳುತ್ತದೆ. ಕೊನೆಗೆ ಸಮಾಧಾನ ಮಾಡಿ ಮಗುವನ್ನು ಎತ್ತಿಕೊಂಡರೂ ಅದರ ಅಳು ಕಡಿಮೆಯಾಗಿರಲಿಲ್ಲ, ಬಾಯ್ ಗಣಪತಿ ಎಂದು ಕಣ್ಣೀರು ಹಾಕುತ್ತದೆ.
https://twitter.com/ankitap1805/status/1568125617832591362?ref_src=twsrc%5Etfw%7Ctwcamp%5Etweetembed%7Ctwterm%5E1568125617832591362%7Ctwgr%5E76000ff18ec2e47905139dfd37d454350a2d5f01%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fganpati-visarjan-2022-devotees-share-photos-videos-bidding-tearful-goodbye-to-bappa-5922997.html