
ಬೆಂಗಳೂರು: ಬೇಲಿಯೇ ಎದ್ದು ಹೊಲಮೆಯ್ದ ಕಥೆಯಂತಿದೆ ಈ ಘಟನೆ. ಗಾಂಜಾ ದಂಧೆ ಮಾಡುತ್ತೀದೀಯಾ ಎಂದು ಬೆದರಿಸಿ ಪೊಲೀಸರೇ 2 ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.
ಗುಜರಿ ಅಂಗಡಿ ಮಾಲೀಕನೊಬ್ಬನಿಂದ ಪೊಲೀಸರು 2 ಲಕ್ಷ ಹಣವನ್ನು ಹಂತ ಹಂತವಾಗಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ನೀನು ಗಾಂಜಾ ದಂಧೆ ಮಾಡುತ್ತಿದ್ದೀಯಾ ಎಂದು ಬೆದರಿಸಿ ಮಾರತ್ತಹಳ್ಳಿ ಠಾಣೆ ಪೊಲೀಸರು ಹಣ ವಸೂಲಿ ಮಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರಾದ ಮಂಜನಗೌಡ ಹಾಗೂ ಸಿದ್ಧನಗೌಡ ವಿರುದ್ಧ ವೈಟ್ ಫೀಲ್ಡ್ ಠಾಣೆಗೆ ಅಖ್ತರ್ ಎಂಬುವವರು ದೂರು ನೀಡಿದ್ದಾರೆ. ಅಲ್ಲದೇ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲೆಗಳನ್ನು ನಿಡಿದ್ದಾರೆ. ಅಕ್ರಮ, ಮಾದಕ ವಸ್ತುಗಳ ಜಾಲವನ್ನು ತಡೆಯಬೇಕಾದ ಪೊಲೀಸರ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ.