
ಬೆಂಗಳೂರು: ಗೂಡಂಗಡಿಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ನಡೆದಿದೆ.
ಕಪಾಲ್ ಪಾಸ್ವಾನಿ (38) ಬಂಧಿತ ಆರೋಪಿ. ಈತ ಬಿಹಾರ ಮೂಲದವನಾಗಿದ್ದು, ಸಿರಗುಪ್ಪ ತಾಲೂಕಿನ ಸಿಂಧನೂರು ಗ್ರಾಮದಲ್ಲಿ ಗೂಡಗಂಡಿ ಇಟ್ಟುಕೊಂಡಿದ್ದ. ಗಾಂಜಾ ಮಿಶ್ರಿತ ಚಾಕೊಲೇಟ್ ಗಳನ್ನು ಮಾರುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಿಬ್ಬಂದಿ, ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 2600 ರೂ.ಮೌಲ್ಯದ ಚಾಕೊಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.