![](https://kannadadunia.com/wp-content/uploads/2025/02/ganja-mandya.jpg)
ಮಂಡ್ಯ: ವ್ಯಕ್ತಿಯೋರ್ವ ಮನೆಯ ಟೆರೇಸ್ ಮೇಲೆಯೇ ಗಾಂಜಾ ಬೆಳೆದು ಗಾಂಜಾ ಗಾರ್ಡನ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಕರಿಯಪ್ಪ ಎಂಬಾತ ತನ್ನ ಮನೆಯ ಟೆರೇಸ್ ಮೇಲೆ ಹೂವಿನ ಪಾಟ್ ಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ. ವಿಷಯ ತಿಳಿದ ಕೊಪ್ಪ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅಪಾರ ಪ್ರಮಾಣದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದು, ಆರೋಪಿ ಕರಿಯಪ್ಪನನ್ನು ಬಂಧಿಸಿದ್ದಾರೆ.